ಜಿಲ್ಲೆ

ದುಷ್ಟ ಶಕ್ತಿ ಓಡಿಸುವುದಾಗಿ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಮುಂಬೈ: ಅಸ್ವಸ್ಥ ಬಾಲಕನ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ ಮಂತ್ರಿವಾದಿ ಓರ್ವ ಮನ ಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಭಾಗದ ಶಿರ್​ಗೂರಿನಲ್ಲಿ ನಡೆದಿದೆ.

ಆರ್ಯನ್​ ದೀಪಕ್​ ಲಂಡ್ಗೆ(14) ಮೃತ ದುರ್ದೈವಿ ಎಂದು ತಿಳಿದಿ ಬಂದಿದ್ದು ಅಪ್ಪಾ ಸಾಹೇಬ್​ ಕಾಂಬ್ಲೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್​ ತಾಲ್ಲೂಕಿನ ಬಾಲಕ ಆರ್ಯನ್​ ಕಳೆದ ಕೆಲವು ದಿನಗಳಿಂದ ತೀವ್ರ ಜ್ಷರದಿಂದ ಬಳಲುತ್ತಿದ್ದ ವೈದ್ಯರು ಹಾಗೂ ಆಯುರ್ವೇದದ ಔಷಧಿಗಳಿಗೂ ಆತ ಗುಣಮುಖನಾಗಿರಲಿಲ್ಲ.

ಇದೇ ವೇಳೆ ಆರ್ಯನ್​ ಕುಟುಂಬಸ್ಥರಿಗೆ ಸ್ನೇಹಿತರೊಬ್ಬರು ಶಿರಗೂರಿನಲ್ಲಿರುವ ಮಂತ್ರವಾದಿ ಅಪ್ಪಾ ಸಾಹೇಬ್ ಕುರಿತು ಹೇಳಿ ಭೇಟಿ ನೀಡುವಂತೆ ಹೇಳಿದ್ದಾರೆ.

ಸ್ನೇಹಿತನ ಮಾತನ್ನು ನಂಬಿದ ಕುಟುಂಬಸ್ಥರು ಅಸ್ವಸ್ಥ ಆರ್ಯನ್​ನನ್ನು ಕರೆದುಕೊಂಡು ಶಿರಗೂರಿನಲ್ಲಿರುವ ಅಪ್ಪಾ ಸಾಹೇಬ್​ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆರೋಪಿಯೂ ಬಾಲಕನ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ ಆತನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ತೀವ್ರವಾಗಿ ಗಾಯಗೊಂಡಿದ್ದ ಅಸ್ವಸ್ಥ ಬಾಲಕನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆರ್ಯನ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಚಾರವನ್ನು ತಿಳಿದ ಅಂಧಶ್ರದ್ಧಾ ನಿರ್ಮೂಲನೆ ಸಮಿತಿ ಸದಸ್ಯರು ಮೃತ ಬಾಲಕಮನ ಕುಟುಂಬಸ್ಥರನ್ನು ಮನವೊಲಿಸಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ ಮತ್ತು ಮಂತ್ರವಾದಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.