ಕಾಸರಗೋಡು: ಹೊಸದುರ್ಗದಲ್ಲಿ ಕ್ವಾರ್ಟರ್ಸ್ ಬಾಗಿಲು ಒಡೆದು ನುಗ್ಗಿದ ಕಳ್ಳರು 12ಪವನ್ ಚಿನ್ನ ಕಳವುಗೈದಿದ್ದಾರೆ. ಹೊಸದುರ್ಗ ಪೇಟೆಯ ಟಿ.ಬಿ ಜಂಕ್ಷನ್ ನಿವಾಸಿ ಪಿ.ಬಿ.ರಾಬಿಯಾ ಎಂಬುವರ ಮನೆಯಿಂದ ಕಳವು ನಡೆದಿದೆ. ರಾಬಿಯಾ ಮನೆಗೆ ಬೀಗ ಹಾಕಿ ಹೊರಗೆ ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನ ಮೇಲಿರಿಸಿದ್ದ ಕೀಲಿಕೈ ಬಳಸಿ, ಬಾಗಿಲು ತೆರೆದು ಚಿನ್ನ ದೋಚಿದ್ದಾರೆನ್ನಲಾಗಿದೆ. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.