ಜಿಲ್ಲೆ

12 ಸಂಚಾರದಟ್ಟಣೆ ರಸ್ತೆಗಳ ಅಭಿವೃದ್ಧಿಗೆ ಸಿದ್ಧತೆ

Mandara

ಗಿರೀಶ್ ಗರಗ ಬೆಂಗಳೂರು: ಅತಿಹೆಚ್ಚು ಸಂಚಾರದಟ್ಟಣೆ ಉಂಟಾಗುವ ರಸ್ತೆಗಳ ಅಭಿವೃದ್ಧಿ ಹಾಗೂ ಅಲ್ಲಿ ಮೋಟಾರು ವಾಹನ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ 12 ಹೈ ಡೆನ್ಸಿಟಿ ಕಾರಿಡಾರ್ ಗುರುತಿಸಿ, ವಿವಿಧ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೆಲ ವರ್ಷಗಳ ಹಿಂದೆಯೇ ರೂಪುಗೊಂಡಿದ್ದ ಈ ಕಾರಿಡಾರ್​ಗಳ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗುತ್ತಿದೆ.

ಹೈ ಡೆನ್ಸಿಟಿ ಕಾರಿಡಾರ್​ಗಳು ಬಳ್ಳಾರಿ ರಸ್ತೆ: ಚಾಲುಕ್ಯ ವೃತ್ತದಿಂದ ಹೆಬ್ಬಾಳ- 7.1 ಕಿ.ಮೀ. ಹಳೇ ಮದ್ರಾಸ್ ರಸ್ತೆ: ಟ್ರಿನಿಟಿ ವೃತ್ತ- ಹೋಪ್ ಫಾಮ್ರ್, ಕೆ.ಆರ್. ಪುರ ರೈಲು ನಿಲ್ದಾಣ- ಮೇದಹಳ್ಳಿ- 21.6 ಕಿಮೀ ಹಳೇ ವಿಮಾನ ನಿಲ್ದಾಣ ರಸ್ತೆ: ಎಸಿಎಸ್ ಕೇಂದ್ರ- ಕಾಡುಗುಡಿ- 19.5 ಕಿ.ಮೀ. ಸರ್ಜಾಪುರ ರಸ್ತೆ: ಹೊಸೂರು ರಸ್ತೆ- ಬಿಬಿಎಂಪಿ ಸರಹದ್ದು- 8.85 ಕಿ.ಮೀ. ಹೊಸೂರು ರಸ್ತೆ: ವೆಲ್ಲಾರ ಜಂಕ್ಷನ್- ಸೆಂಟ್ರಲ್ ಸಿಲ್ಕ್​ಬೋರ್ಡ್- 6.7 ಕಿ.ಮೀ. ಬನ್ನೇರಘಟ್ಟ ರಸ್ತೆ: ಹೊಸೂರು ಲಷ್ಕರ್ ರಸ್ತೆ- ಕೋಳಿ ಫಾಮ್ರ್ ಜಂಕ್ಷನ್- 13 ಕಿ.ಮೀ. ಕನಕಪುರ ರಸ್ತೆ: ಕೆ.ಆರ್. ರಸ್ತೆ- ನೈಸ್ ರಸ್ತೆ- 14.5 ಕಿ.ಮೀ. ಮೈಸೂರು ರಸ್ತೆ: ಹಡ್ಸನ್ ವೃತ್ತ- ಜ್ಞಾನಭಾರತಿ ಜಂಕ್ಷನ್- 9 ಕಿ.ಮೀ. ಮಾಗಡಿ ರಸ್ತೆ: ಹಳೇ ಬಿನ್ನಿ ಮಿಲ್- ಅಂಜನಾನಗರ- 11.5 ಕಿ.ಮೀ. ತುಮಕೂರು ರಸ್ತೆ: ಸಂಗೊಳ್ಳಿ ರಾಯಣ್ಣ ವೃತ್ತ- ಗೊರಗುಂಟೆಪಾಳ್ಯ ಜಂಕ್ಷನ್- 7.85 ಕಿಮೀ ಕಾರ್ಡ್ ರಸ್ತೆ: ಸ್ಯಾಂಡಲ್ ಸೋಪ್ ಫ್ಯಾಕ್ಟರಿ- ಮೈಸೂರು ರಸ್ತೆ- 8.65 ಕಿ.ಮೀ. ಹೊರವರ್ತಲ ರಸ್ತೆ: ಗೊರಗುಂಟೆ ಪಾಳ್ಯ ಜಂಕ್ಷನ್- ಕೊಟ್ಟಿಗೆಪಾಳ್ಯ- 62 ಕಿಮೀ

ಈ ಹಿಂದೆ ಬಿಬಿಎಂಪಿಯಿಂದ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಯೋಜನೆ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದಿಟಛಿ ನಿಗಮಕ್ಕೆ (ಕೆಆರ್​ಡಿಸಿಎಲ್) ವಹಿಸಲಾಗಿದೆ. ಕಾರಿಡಾರ್​ಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದಿಟಛಿ ಕಾರ್ಯಗಳ ಕುರಿತು ವಿವರ ಕಾರ್ಯಸಾಧ್ಯತಾ ವರದಿ ಸಿದಟಛಿಪಡಿಸಿ ಸರ್ಕಾರದ ಅನುಮೋದನೆಗೆ ಕೆಆರ್​ಡಿಸಿಎಲ್ ಸಲ್ಲಿಸಿದೆ. ಹೈ ಡೆನ್ಸಿಟಿ ಕಾರಿಡಾರ್​ಗಳಲ್ಲಿ ಸೈಕಲ್ ಪಥ, ರಸ್ತೆ ಡಾಂಬರೀಕರಣ, ಸೂಚನಾ ಫಲಕ ಅಳವಡಿಕೆ ಮತ್ತಿತರ ಕಾಮಗಾರಿ ನಡೆಯಲಿವೆ. ಪ್ರಮುಖವಾಗಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

5 ವರ್ಷಕ್ಕೆ ಸಾವಿರ ಕೋಟಿ ರೂ.: ಡಿಎಫ್​ಆರ್ ನಲ್ಲಿರುವಂತೆ ಮೊದಲ ವರ್ಷದ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 477.29 ಕೋಟಿ ರೂ. ಅವಶ್ಯಕತೆಯಿದೆ. ಉಳಿದಂತೆ, ಮುಂದಿನ 4 ವರ್ಷಗಳ ನಿರ್ವಹಣೆಗಾಗಿ 642.71 ಕೋಟಿ ರೂ. ಬೇಕಾಗಲಿದೆ. ಒಟ್ಟಾರೆ 5 ವರ್ಷಗಳಿಗೆ 1,120 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಲಾಗಿದೆ.

ಅನುಮೋದನೆ ಬಾಕಿ: ಕೆಆರ್​ಡಿಸಿಎಲ್ ಸಲ್ಲಿಸಿರುವ ವರದಿಗೆ ಈವರೆಗೆ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುಮೋದನೆ ಸಿಕ್ಕಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ದೊರೆತಿದ್ದು, ಸದ್ಯ ಆರ್ಥಿಕ ಇಲಾಖೆಯಲ್ಲಿ ಕಡತವಿದೆ. ಅಲ್ಲಿ ಒಪ್ಪಿಗೆ ದೊರೆತ ನಂತರ 3 ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆಯಲು ಕೆಆರ್​ಡಿಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಲವು ಕಾಮಗಾರಿಗಳು: 12 ಹೈ ಡೆನ್ಸಿಟಿ ಕಾರಿಡಾರ್​ನಲ್ಲಿ ಬರುವ ರಸ್ತೆ ಅಭಿವೃದ್ಧಿ ಜತೆಗೆ, ಚರಂಡಿ ದುರಸ್ತಿ, ಹೂಳು ತೆಗೆಯುವುದು, ಪಾದಚಾರಿ ಮಾರ್ಗ ಅಭಿವೃದ್ಧಿ, ರಸ್ತೆ ಮಾರ್ಕಿಂಗ್, ಪಥ ವಿಭಜಕ ಅಳವಡಿಕೆ, ಜಂಕ್ಷನ್​ಗಳ ಅಭಿವೃದ್ಧಿ, ಸೈಕಲ್ ಪಥ ನಿರ್ಮಾಣ, ಒಎಫ್​ಸಿ ಅಳವಡಿಕೆಗೆ ಸೂಕ್ತ ಜಾಗ ನೀಡುವುದು- ಹೀಗೆ ಹಲವು ಕಾರ್ಯ ಮಾಡಲಾಗುತ್ತದೆ. ಅದರ ಜತೆಗೆ ಮುಂದಿನ 5 ವರ್ಷ ರಸ್ತೆಗಳ ದುರಸ್ತಿ, ಸ್ವಚ್ಛತೆ ಇನ್ನಿತರ ಕಾರ್ಯಗಳನ್ನು ಮಾಡಬೇಕಿದೆ.