ವಾಣಿಜ್ಯ

ಎಸ್​ಬಿಐನ 30,000 ಉದ್ಯೋಗಿಗಳಿಗೆ ವಿಆರ್​ಎಸ್​

manjunathktgns

ನವದೆಹಲಿ: ದೇಶದ ಮುಂಚೂಣಿ ಬ್ಯಾಂಕ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್​ಬಿಐ) ವಾಲಂಟರಿ ರಿಟೈರ್​ಮೆಂಟ್ ಸ್ಕೀಮ್ (ವಿಆರ್​ಎಸ್​) ಅನ್ನು ಜಾರಿಗೊಳಿಸಿದ್ದು, 30,190 ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ. ​ಬಿಐನ ಒಟ್ಟು ಉದ್ಯೋಗಿಗಳ ಸಂಖ್ಯೆ 2019ರ ಮಾರ್ಚ್​ನಲ್ಲಿ 2.57 ಲಕ್ಷ ಇದ್ದುದು, 2020ರ ಮಾರ್ಚ್​ಗೆ 2.49 ಲಕ್ಷ ಆಗಿದೆ. ಈಗ ವಿಆರ್​ಎಸ್​ ಜಾರಿಯಾದ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ.

ಮೂಲಗಳ ಪ್ರಕಾರ, ವಿಆರ್​ಎಸ್​ನ ಕರಡು ಯೋಜನೆ ಸಿದ್ಧವಾಗಿದ್ದು, ಆಡಳಿತ ಮಂಡಳಿಯ ಅನುಮೋದನೆಗಾಗಿ ಕಾಯಲಾಗಿದೆ. ಪ್ರಸ್ತಾವಿತ ಸ್ಕೀಮ್​ಗೆ ಸೆಕೆಂಡ್​ ಇನ್ನಿಂಗ್ಸ್​ ಟ್ಯಾಪ್ ವಿಆರ್​ಎಸ್​ 2020 ಎಂದು ಹೆಸರಿಸಲಾಗಿದೆ. ಬ್ಯಾಂಕಿನ ಮಾನವ ಸಂಪನ್ಮೂಲ ಹದಗೊಳಿಸಿ, ವೆಚ್ಚದ ಹೊರೆಯನ್ನು ತಗ್ಗಿಸುವ ಉದ್ದೇಶ ಇದರದ್ದು ಎಂದು ಹೇಳಲಾಗುತ್ತಿದೆ.

ಈ ಸ್ಕೀಮ್ ಮೂಲಕ ಉದ್ಯೋಗಿಗಳಿಗೆ ಗೌರವಯುತ ಬೀಳ್ಕೊಡುಗೆ ನೀಡಲಾಗುತ್ತಿದೆ. 25 ವರ್ಷ ಸೇವೆ ಪೂರ್ಣಗೊಳಿಸಿದವರು ಮತ್ತು 55 ವರ್ಷ ಮೇಲ್ಪಟ್ಟವರನ್ನು ಇದಕ್ಕೆ ಪರಿಗಣಿಸಲಾಗುತ್ತಿದೆ. ಈ ವರ್ಷದ ಡಿಸೆಂಬರ್ 1ರಂದು ಈ ಯೋಜನೆ ಆರಂಭವಾಗಲಿದ್ದು ಫೆಬ್ರವರಿ ಕೊನೆಯ ತನಕ ಇರಲಿದೆ. ಈ ಅವಧಿಯಲ್ಲಿ ವಿಆರ್​ಎಸ್ ತೆಗೆದುಕೊಳ್ಳುವವರಿಗೆ ಕೆಲವು ಪ್ರಯೋಜನಗಳು ಸಿಗಲಿವೆ. ಈ ಅವಧಿಯನ ನಂತರ ಬರುವ ವಿಆರ್​ಎಸ್ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬ್ಯಾಂಕ್ ಮೂಲಗಳು ಹೇಳಿಕೊಂಡಿವೆ. (ಏಜೆನ್ಸೀಸ್)