More

    12ರಿಂದ 7 ವಿಶೇಷ ರೈಲು ಸಂಚಾರ : ವಾರದಲ್ಲಿ 6 ದಿನ ಬೆಂಗಳೂರು- ಮೈಸೂರು ರೈಲು

    ಬೆಂಗಳೂರು: ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಹಂತಹಂತವಾಗಿ ಟ್ರಾ್ಯಕ್​ಗೆ ಮರಳಲಿದ್ದು, ಸೆ. 12ರಿಂದ ನೈಋತ್ಯ ರೈಲ್ವೆ 7 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ.

    ರಾಜ್ಯದ ವಿವಿಧ ನಗರಗಳು ಹಾಗೂ ಹೊರರಾಜ್ಯಗಳಿಗೆ ಸಂರ್ಪಸುವ 7 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅದರನ್ವಯ, ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಬೆಂಗಳೂರು- ಮೈಸೂರು ನಡುವೆ ಬುಧವಾರ, ಗುರುವಾರ ಮತ್ತು ಶುಕ್ರವಾರ ಬೆಂಗಳೂರು ದಂಡು ನಿಲ್ದಾಣದಿಂದ ಗುವಾಹಟಿಗೆ ಶುಕ್ರವಾರ ಮತ್ತು ಭಾನುವಾರ ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್​ಗೆ ಸೋಮವಾರ ಮತ್ತು ಮಂಗಳವಾರ ಯಶವಂತಪುರದಿಂದ ಉತ್ತರ ಪ್ರದೇಶದ ಗೋರಖ್​ಪುರಕ್ಕೆ ಗುರುವಾರ ಮತ್ತು ಶನಿವಾರ ಮೈಸೂರಿನಿಂದ ಜೈಪುರಕ್ಕೆ ರೈಲುಗಳು ಸಂಚರಿಸಲಿವೆ.

    ಇದನ್ನೂ ಓದಿ: ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಹಕ್ಕಿಲ್ಲ ಎನ್ನುತ್ತಿದ್ದಾರೆ ಮಾವಂದಿರು, ಇದು ಸರಿಯೆ?

    ಮೈಸೂರಿನಿಂದ ಸೊಲ್ಲಾಪುರ, ಬೆಂಗಳೂರಿನಿಂದ ದೆಹಲಿಗೆ ಪ್ರತಿದಿನ ವಿಶೇಷ ರೈಲು ಸೇವೆ ಇರಲಿದೆ. ಸೆ. 10ರಿಂದ ಆನ್​ಲೈನ್​ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.

    ದಯವಿಟ್ಟು ಗಮನಿಸಿ.. ಇಂದಿನಿಂದ ಮೆಟ್ರೋದಲ್ಲೂ ಪ್ರಯಾಣಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts