More

    ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಹಕ್ಕಿಲ್ಲ ಎನ್ನುತ್ತಿದ್ದಾರೆ ಮಾವಂದಿರು, ಇದು ಸರಿಯೆ?

    ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಹಕ್ಕಿಲ್ಲ ಎನ್ನುತ್ತಿದ್ದಾರೆ ಮಾವಂದಿರು, ಇದು ಸರಿಯೆ? ಪ್ರಶ್ನೆ: ನಮ್ಮ ತಾತನಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಒಬ್ಬ ಮಗಳು (ಅಂದರೆ ನಮ್ಮ ತಾಯಿ). ನಮ್ಮ ತಾತ ತೀರಿಕೊಂಡು 23 ವರ್ಷಗಳಾಗಿವೆ. ಎಲ್ಲ ಆಸ್ತಿಗಳೂ ನಮ್ಮ ತಾತನ ಸ್ವಯಾರ್ಜಿತ ಆಸ್ತಿಗಳು. ನಮ್ಮ ತಾತ ನಮ್ಮ ತಾಯಿಗೆ ಕೊಡಬೇಕೆಂದುಕೊಂಡಿದ್ದ ಆಸ್ತಿಯನ್ನು ನಮ್ಮ ಮಾವ ಈಗ ಬೇರೆಯವರಿಗೆ ನಮ್ಮ ತಾಯಿಗೆ ತಿಳಿಸದೇ , ಮಾರಾಟ ಮಾಡಿದ್ದಾರೆ. ನಮ್ಮ ತಾಯಿಗೆ ಮದುವೆ ಆಗಿ ನಲವತ್ತು ವರ್ಷಗಳಾಗಿವೆ. ಆದ್ದರಿಂದ ಭಾಗ ಇಲ್ಲ ಎಂದು ನಮ್ಮ ಮಾವ ಹೇಳುತ್ತಿದ್ದಾರೆ. ನಾವು ಏನು ಮಾಡಬಹುದು? ದಯವಿಟ್ಟು ತಿಳಿಸಿ. 

    ಉತ್ತರ: ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಆತನ ಪತ್ನಿಗೆ ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ. ನಿಮ್ಮ ತಾತನ ಆಸ್ತಿ (ನಿಮ್ಮ ಅಜ್ಜಿ ಇಲ್ಲದಿದ್ದರೆ) ಅವರ ಇಬ್ಬರು ಮಕ್ಕಳಿಗೂ ಸಮಪಾಲಾಗ ಬೇಕು. ಹೆಣ್ಣು ಮಕ್ಕಳಿಗೆ ಯಾವಾಗ ಮದುವೆ ಆಗಿದ್ದರೂ ಅವರ ಆಸ್ತಿಯ ಹಕ್ಕು ಅದರಿಂದ ಕುಂಠಿತವಾಗುವುದಿಲ್ಲ. ನಿಮ್ಮ ತಾಯಿಯ ಮೂಲಕ ವಿಭಾಗದ ದಾವೆ ಹಾಕಿಸಿ. ಕೊಂಡುಕೊಂಡಿರುವವರನ್ನೂ ದಾವೆಯಲ್ಲಿ ಪಾರ್ಟಿ ಮಾಡಿ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಇದನ್ನು ಕಾಪಿ ಮಾಡಿ ಪೇಸ್ಟ್‌ ಮಾಡಿ)

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts