ವಾಣಿಜ್ಯ

ಡಿಜಿಟಲ್ ಸ್ಕಿಲ್​ ಟ್ರೇನಿಂಗ್​ ಉಚಿತವಾಗಿ ನೀಡುವುದಕ್ಕೆ ಎನ್​ಎಸ್​ಡಿಸಿ-ಲಿಂಕ್ಡ್​ಇನ್ ಪಾಲುದಾರಿಕೆ

sspmiracle1982

ನವದೆಹಲಿ: ಯುವಜನರಲ್ಲಿ ಉದ್ಯೋಗ ಕೌಶಲ ವೃದ್ಧಿಗಾಗಿ ನೆರವಾಗುವ ನಿಟ್ಟಿನಲ್ಲಿ ನ್ಯಾಷನಲ್​ ಸ್ಕಿಲ್ ಡೆವಲಪ್​ಮೆಂಟ್​ ಕಾರ್ಪೊರೇಶನ್​ ಮತ್ತು ಪ್ರೊಫೆಷನಲ್ ನೆಟ್​ವರ್ಕ್ ಲಿಂಕ್ಡ್​ಇನ್​ ನಡುವೆ ಒಪ್ಪಂದ ಏರ್ಪಟ್ಟಿದೆ. ಮಂಗಳವಾರ ಈ ವಿಷಯವನ್ನು ಬಹಿರಂಗಪಡಿಸಿದ ಈ ಸಂಸ್ಥೆಗಳು, ಲಿಂಕ್ಡ್​ಇನ್ ಲರ್ನಿಂಗ್ ರಿಸೋರ್ಸ್​ ಅನ್ನು ಉಚಿತವಾಗಿ ಯುವಜನರಿಗೆ ಲಭ್ಯವಾಗಲಿದೆ ಎಂದು ಹೇಳಿವೆ.

ಈ ಪಾಲುದಾರಿಕೆಯ ಅನ್ವಯ, 10 ಉಚಿತ ಲಿಂಕ್ಡ್​ ಇನ್​ ಲರ್ನಿಂಗ್ ಪಾಥ್ಸ್ ಮೂಲಕ 140 ಕೋರ್ಸ್​ಗಳು ಲಭ್ಯವಾಗಲಿವೆ. ಇವು ಬೇಡಿಕೆಯಲ್ಲಿರುವ ಟೆಕ್ ಉದ್ಯೋಗ ಕೌಶಲಕ್ಕೆ ಸಂಬಂಧಿಸಿದವು. ಇವುಗಳು ಇಸ್ಕಿಲ್​ ಇಂಡಿಯಾ ಡಿಜಿಟಲ್ ಪ್ಲಾಟ್​ಫಾರಂನಲ್ಲಿ 2012ರ ಮಾರ್ಚ್​ 31ರ ತನಕ ಸ್ವಕಲಿಕೆಗೆ ಸಿಗಲಿವೆ.

ಇದಲ್ಲದೆ, ಭಾರತದಲ್ಲಿರುವ ತನ್ನ 6.9 ಕೋಟಿ ಸದಸ್ಯರ ಆರ್ಥಿಕ ಗ್ರಾಫ್​ ಆಧಾರವಾಗಿ ಲೇಬರ್​ ಮಾರ್ಕೆಟ್​ನ ಇನ್​ಸೈಟ್​ಗಳನ್ನೂ ಒದಗಿಸುತ್ತದೆ. ಇದರಲ್ಲಿ ಬೇಡಿಕೆಯಲ್ಲಿರುವ ಕೌಶಲಗಳು, ಉದಯೋನ್ಮುಖ ಉದ್ಯೋಗಗಳು, ಗ್ಲೋಬಲ್​ ಹೈರಿಂಗ್ ರೇಟ್​ ಮುಂತಾದವುಗಳ ವಿವರವೂ ಸಿಗಲಿವೆ.

ಲಿಂಕ್ಡ್​ಇನ್​ ಡೇಟಾ ಪ್ರಕಾರ, 2020ರಲ್ಲಿ ಡಿಜಿಟಲ್ ಸ್ಕಿಲ್​ ಇಲ್ಲದ ವೃತ್ತಿಪರರಿಗಿಂತ ಡಿಜಿಟಲ್ ಸ್ಕಿಲ್ ಹೊಂದಿರುವ ಭಾರತೀಯ ವೃತ್ತಿಪರರ ಬೇಡಿಕೆ ಶೇಕಡ 20 ಹೆಚ್ಚು. ಹೀಗಾಗಿ ಈ ಉಚಿತ ಕಲಿಕಾ ಕೋರ್ಸ್​ಗಳು ಭಾರತದ ಯುವಜನರ ಕೌಶಲ ವೃದ್ಧಿಗೆ ನೆರವಾಗಲಿದೆ ಎಂದು ಅವು ಹೇಳಿಕೊಂಡಿವೆ. (ಏಜೆನ್ಸೀಸ್)