ವಾಣಿಜ್ಯ

ವಸತಿ ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಉಡುಗೊರೆ- ಬಿಲ್ಡರ್​ಗಳಿಗೂ, ಮನೆ ಖರೀದಿದಾರರಿಗೂ ತೆರಿಗೆ ವಿನಾಯಿತಿ

ನವದೆಹಲಿ: ವಸತಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹಬ್ಬದ ಉಡುಗೊರೆಯ ರೂಪದಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗಿದೆ. ಮನೆ ನಿರ್ಮಾಣದಾರರಿಗೂ, ಚೊಚ್ಚಲ ಮನೆ ಖರೀದಿದಾರರಿಗೂ ಆದಾಯ ತೆರಿಗೆ ವಿನಾಯಿತಿ ಪ್ರಮಾಣವನ್ನು ಹೆಚ್ಚಿಸಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಿಳಿಸಿದ್ದಾರೆ.

ಎರಡು ಕೋಟಿ ರೂಪಾಯಿ ಮೌಲ್ಯದೊಳಗಿನ ಮನೆಯನ್ನು ಮೊದಲ ಬಾರಿ ಖರೀದಿಸುವವರು ಶೇ20ರ ತನಕ ಆದಾಯ ತೆರಿಗೆ ವಿನಾಯಿತಿಯನ್ನು 2021ರ ಜೂನ್ 30ರ ತನಕ ಪಡೆಯಬಹುದಾಗಿದೆ. ಇದು ಚೊಚ್ಚಲ ಮನೆ ಖರೀದಿಗೆ ಮುಂದಾಗುವ ಜನರಿಗೆ ಸಿಗುವ ಇನ್​ಸೆಂಟಿವ್ಸ್ ಆಗಿದೆ.

ಇದುವರೆಗೆ, ಅಗ್ರಿಮೆಂಟ್ ಮತ್ತು ಸರ್ಕಲ್ ರೇಟ್​ನ ಶೇಕಡ 10 ವ್ಯತ್ಯಾಸವನ್ನಷ್ಟೇ ವಿನಾಯಿತಿಗೆ ಪರಿಗಣಿಸಲಾಗುತ್ತಿತ್ತು. ಸರ್ಕಾರದ ಈ ಕ್ರಮವು ಮನೆ ಖರೀದಿದಾರರು ಹಾಗೂ ಡೆವಲಪರ್​ಗಳಿಗೆ ಈ ಸಂದಿಗ್ಧ ಕಾಲದಲ್ಲಿ ಅನುಕೂಲಕರವಾಗಿರಲಿದೆ ಎಂದು ಅವರು ತಿಳಿಸಿದರು. (ಏಜೆನ್ಸೀಸ್)