ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ´ಫೋನ್ ಉತ್ಪಾದನೆಯನ್ನು ಐದು ಪಟ್ಟು ಹೆಚ್ಚಿಸಲು ಐಫೋನ್ ತಯಾರಕ ಕಂಪನಿ ಆ್ಯಪಲ್ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಉತ್ಪಾದನೆಯ ಟಾರ್ಗೆಟ್ ಮೊತ್ತ 3.32 ಲಕ್ಷ ಕೋಟಿ ರೂಪಾಯಿ (40 ಬಿಲಿಯ ಡಾಲರ್) ಆಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆ್ಯಪಲ್ ಕಳೆದ ಹಣಕಾಸು ವರ್ಷದಲ್ಲಿ 700 ಶತಕೋಟಿ ಡಾಲರ್ ಉತ್ಪಾದನೆ ಗಡಿಯನ್ನು ದಾಟಿದೆ ಎಂದು ಹೆಸರು ಪ್ರಕಟಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ, ಮುಂದಿನ ಐದು ವರ್ಷಗಳ ಉತ್ಪಾದನೆ ಹೆಚ್ಚಳ ಕುರಿತಂತೆ ಆ್ಯಪಲ್ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಐೋನ್ ತಯಾರಿಸುವ ಆ್ಯಪಲ್ ಮುಂದಿನ ವರ್ಷದಿಂದ ಏರ್ಪ್ಯಾಡ್ ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ಆದರೆ, ಭಾರತದಲ್ಲಿ ಐಪ್ಯಾಡ್ ಅಥವಾ ತನ್ನ ಲ್ಯಾಪ್ಟಾಪ್ ತಯಾರಿಸಲು ಆ್ಯಪಲ್ ತಕ್ಷಣಕ್ಕೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 25ರಂದು ಮುಕ್ತಾಯವಾದ ಹಣಕಾಸು ವರ್ಷದಲ್ಲಿ ಆ್ಯಪಲ್ ಜಾಗತಿಕವಾಗಿ 191 ಶತಕೋಟಿ ಡಾಲರ್ ಮೌಲ್ಯದ ಐೋನ್ಗಳನ್ನು ಮಾರಾಟ ಮಾಡಿದೆ. ಗೃಹ ಮತ್ತು ಆಕ್ಸೆಸರಿ ವಿಭಾಗದಲ್ಲಿ 38.36 ಶತಕೋಟಿ ಡಾಲರ್ ಮೌಲ್ಯದ ಸಾಧನಗಳನ್ನು ಮಾರಿದೆ.