ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಪುನೀತ್ ಬಗ್ಗೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ದಕ್ಷಿಣದ ತೆಲುಗು ಮತ್ತು ತಮಿಳಿನ ಮಂದಿ ಪುನೀತ್ ಅವರ ಡಾನ್ಸ್ ನೋಡಿಯೇ ಫಿದಾ ಆದವರಿದ್ದಾರೆ. ಇದೀಗ ಸಿನಿಮಾವನ್ನೂ ಕಣ್ತುಂಬಿಕೊಳ್ಳುವ ಸಮಯ ಹತ್ತಿರ ಬಂದಿದೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಪತಿ ಜತೆಗೆ ಸಮಂತಾ ಹಾಲಿಡೇ …
ಅಂದರೆ, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆಕಾಣಲಿದೆ. ಈ ಹಿಂದೆ ಇಂಥದ್ದೊಂದು ಸುದ್ದಿ ಹರಿದಾಡಿತ್ತಾದರೂ, ಅಧಿಕೃತ ಘೋಷಣೆ ಆಗಿರಲಿಲ್ಲ. ಇದೀಗ ಸ್ವತಃ ಚಿತ್ರತಂಡವೇ ಆ ಖುಷಿಯ ವಿಚಾರವನ್ನು ಹೇಳಿಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತೆಲುಗಿನ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ತಂಡ, ಡಿಸೆಂಬರ್ 2ಕ್ಕೆ ಹಾಡನ್ನೂ ಬಿಡುಗಡೆ ಮಾಡಿಕೊಳ್ಳಲಿದೆ. ಈ ನಡುವೆ ಯುವರತ್ನ ಸಿನಿಮಾ ತೆಲುಗಿನಲ್ಲಿ ತೆರೆಕಾಣಲಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ, ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುನೀತ್ ಅವರನ್ನು ಸ್ವಾಗತಿಸಿದ್ದಾರೆ.
‘ಕನ್ನಡ ಕಂಠೀರವ ಡಾ. ರಾಜಕುಮಾರ್ ಅವರ ಪುತ್ರ, ನನ್ನ ಹೀರೊ ಪುನೀತ್ ರಾಜಕುಮಾರ್ ಟಾಲಿವುಡ್ಗೆ ನಿಮಗೆ ಸ್ವಾಗತ. ಲವ್ ಯೂ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ. ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಯುವರತ್ನ ಸಿನಿಮಾ ನಿರ್ಮಿಸಿದೆ’ ಎಂದು ಬರೆದುಕೊಂಡಿದ್ದಾರೆ.