ಮುಂಬೈ: ಗಣೇಶ್ ಅಭಿನಯದ ‘ಉಲ್ಲಾಸ ಉತ್ಸಾಹ’ ಚಿತ್ರ ನೆನಪಿರಬೇಕಲ್ಲ? ಈ ಸಿನಿಮಾದಲ್ಲಿ ನಟಿಸಿದ್ದ ಯಾಮಿ ಗೌತಮ್, ನಂತರ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದರು. ಈಗ ಅವರು ತಮ್ಮ ‘ಉರಿ’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಜತೆಗೆ ಸಪ್ತಪದಿ ತುಳಿದಿದ್ದಾರೆ.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅವರು ಮದುವೆಯಾಗಿದ್ದು, ಎರಡು ಕುಟುಂಬದ ಕೆಲವರು ಮಾತ್ರ ಭಾಗವಹಿಸಿದ್ದಾರೆ. ಚಿತ್ರರಂಗದ ಪರವಾಗಿ ಯಾವುದೇ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಹಾಜರಿರಲಿಲ್ಲ. ಮದುವೆಯ ನಂತರ ಯಾಮಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡಿದ್ದು, ಹಲವರು ಶುಭಾಶಯ ತಿಳಿಸಿದ್ದಾರೆ.
ಆದಿತ್ಯ ಮತ್ತು ಯಾಮಿ ಅವರದ್ದು ಲವ್ ಕಂ ಅರೇಂಜ್ಡ್ ಮದುವೆಯಾಗಿದ್ದು, ‘ಉರಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇತ್ತು. ಮದುವೆಯಾಗುವ ಮೂಲಕ ಆದಿತ್ಯ ಮತ್ತು ಯಾಮಿ, ಅದೆಲ್ಲಕ್ಕೂ ತೆರೆ ಎಳೆದಿದ್ದಾರೆ.
'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಬಣ್ಣ ಹಚ್ಚಿದ ಯಾಮಿ, ನಂತರದ ದಿನಗಳಲ್ಲಿ ಆಯುಷ್ಮಾನ್ ಖುರಾನ ಅಭಿನಯದ ‘ವಿಕ್ಕಿ ಡೋನಾರ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಅದಲ್ಲದೆ, ಹೃತಿಕ್ ರೋಶನ್ ಅಭಿನಯದ ‘ಕಾಬಿಲ್’, ವಿಕ್ಕಿ ಕೌಶಾಲ್ ನಟನೆಯ ‘ಉರಿ - ದಿ ಸರ್ಜಿಕಲ್ ಸ್ಟ್ರೈಕ್’ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
Yami G