ಸಿನಿವಾಣಿ

ಪುಷ್ಪ 2 ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಎಲ್ಲರ ಗಮನ ಸೆಳೆದ ಪಾವನಿ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ... Pushpa 2

Pushpa 2 : ಐಕಾನ್​ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಕಳೆದ ವರ್ಷದ ಡಿ.05 ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಮೊದಲ ದಿನವೇ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಚಿತ್ರ ಒಟ್ಟು 1500 ಕೋಟಿಗೂ ಅಧಿಕ ಹಣ ಗಳಿಸಿ, ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ.

ಪುಷ್ಪ 2 ಸಿನಿಮಾದಲ್ಲಿ ವಿಶೇಷ ಪಾತ್ರವೊಂದಿದೆ. ಇಡೀ ಕತೆಗೆ ರೋಚಕ ತಿರುವು ನೀಡೋದೆ ಆ ಪಾತ್ರ. ಯಾವುದು ಆ ಪಾತ್ರ ಅಂದರೆ ಕಾವೇರಿ ಹೆಸರಿನ ಹಳ್ಳಿ ಹುಡುಗಿ ಪಾತ್ರ. ಅಲ್ಲು ಅರ್ಜುನ್​ ಅವರ ಅಣ್ಣನ ಮಗಳಾಗಿ ಕಾವೇರಿ ಪಾತ್ರಕ್ಕೆ ಪಾವನಿ ಕರಣಂ ಬಣ್ಣ ಹಚ್ಚಿದ್ದಾರೆ. ಕಿಡ್ನಾಪ್​ ಆಗುವ​ ತನ್ನ ಅಣ್ಣನ ಮಗಳನ್ನು ಉಳಿಸಲು, ಪುಷ್ಪ ರಾಜ್ ಸಚಿವರ ಮಗನನ್ನೂ ಸಹ ಬಿಡದೆ ಕೊಲ್ಲುತ್ತಾನೆ. ಇಡೀ ಕತೆಗೆ ಇದೇ ತಿರುವು.

ಪಾವನಿಯ ನಟನೆ ರಶ್ಮಿಕಾ ಮಂದಣ್ಣ ಅವರಷ್ಟೇ ಗಮನ ಸೆಳೆಯಿತು ಮತ್ತು ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾದಲ್ಲಿ ಥೇಟ್​ ಹಳ್ಳಿ ಹುಡುಗಿಯಂತೆ ಕಾಣುವ ಪಾವನಿ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಹಾಟ್​. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆಗಾಗಾ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.

ಅಂದಹಾಗೆ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುಂಚೆ ಪಾವನಿ ಕರಣಂ, ತೆಲುಗು ಇಂಡಸ್ಟ್ರಿಯಲ್ಲಿ ಪ್ರಸಿದ್ಧ ನಟಿಯಾಗಿದ್ದರು. ಆದರೆ, ಪುಷ್ಪ 2 ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು. ಪಾವನಿ ಅವರು 2023ರಲ್ಲಿ ದಕ್ಷಿಣ ಚಿತ್ರರಂಗ ಪ್ರವೇಶಿಸಿದರು. ಪಾವನಿ ಅವರ ಚೊಚ್ಚಲ ಚಿತ್ರ 'ಪರೇಶಾನ್'. ಇದಲ್ಲದೆ, 2024ರಲ್ಲಿ ನಟಿಯ ಎರಡನೇ ಚಿತ್ರ 'ಪೆಲ್ಲಂ ಪಿಲ್ಲಗ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಿಂದ ಪಡೆದ ಯಶಸ್ಸನ್ನು ಪಾವನಿ ಅವರು ಈ ಹಿಂದಿನ ಎರಡೂ ಚಿತ್ರಗಳಿಂದ ಪಡೆಯಲು ಸಾಧ್ಯವಾಗಲಿಲ್ಲ. ಈ ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ, ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಪಾವನಿ ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಪಾವನಿ ಕರಣಂ ಸಿನಿಮಾ ರಂಗಕ್ಕೆ ಬರುವ ಮೊದಲು ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಅವರು 'ಮಾಡರ್ನ್ ಲವ್ ಹೈದರಾಬಾದ್' ಎಂಬ ಟಿವಿ ಸರಣಿಯಲ್ಲೂ ಕೆಲಸ ಮಾಡಿದ್ದಾರೆ. ಪ್ರಸ್ತುತ, ಪಾವನಿ ಪುಷ್ಪ 2 ರ ಅದ್ಭುತ ಯಶಸ್ಸನ್ನು ಆನಂದಿಸುತ್ತಿದ್ದಾರೆ. (ಏಜೆನ್ಸೀಸ್)