ಪುಣೆ: ಯುವಕನೊಬ್ಬ ಪ್ಯಾರಾಗ್ಲೈಡ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಶ್ರೇಣಿಯ ಪ್ರವಾಸಿ ಸ್ಥಳ ಹ್ಯಾರಿಸನ್ಸ್ ಫಾಲಿಯಲ್ಲಿ ಸಮರ್ಥ್ ಮಹಾಂಗಡೆ ಎಂಬ ಯುವಕ ಜ್ಯೂಸ್ ಅಂಗಡಿ ಹೊಂದಿದ್ದಾನೆ. ಬಿ.ಕಾಂ ವಿದ್ಯಾರ್ಥಿಯಾಗಿರುವ ಈತ ಪರೀಕ್ಷೆಯ ದಿನವನ್ನು ಮರೆತು ಕೆಲಸದಲ್ಲಿ ನಿರತನಾಗಿದ್ದ. ಈ ವೇಳೆ ಸಮರ್ಥ್ಗೆ ಆತನ ಸ್ನೇಹಿತರು ಕರೆ ಮಾಡಿ ಪರೀಕ್ಷೆ ಇದೆ ಎಂದು ನೆನಪಿಸಿದ್ದಾರೆ. ಆತ ಇದ್ದ ಸ್ಥಳದಿಂದ ಪರೀಕ್ಷಾ ಕೇಂದ್ರ 15 ಕಿ.ಮೀ. ದೂರ ಇದ್ದು, ಕೇವಲ 30 ನಿಮಿಷ ಮಾತ್ರ ಸಮಯ ಇತ್ತು. ರಸ್ತೆ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಅಸಾಧ್ಯ ಎಂಬ ಸ್ಥಿತಿ ಇತ್ತು. ತಕ್ಷಣ ಯುವಕ ಹ್ಯಾರಿಸನ್ ಫಾಲ್ ನಲ್ಲಿ ಪ್ಯಾರಾಗ್ಲೈಡ್ ತರಬೇತುದಾರ ಗೋವಿಂದ ಯೇವಲೆ ಬಳಿ ಹೋಗಿ ತನ್ನ ಸಂಕಷ್ಟ ತೋಡಿಕೊಂಡಿದ್ದಾನೆ. ಯುವಕನ ನೆರವಿಗೆ ಬಂದ ಗೋವಿಂದ ಅವರು ತಮ್ಮ ಪ್ಯಾರಾಗ್ಲೈಡ್ನಲ್ಲಿ ಆತನನ್ನು ಆತನನ್ನು ಕರೆತಂದು ಪರೀಕ್ಷಾ ಕೇಂದ್ರದ ಬಳಿ ಇಳಿಸಿದ್ದಾರೆ.