ಸಿನಿವಾಣಿ

ನವರಾತ್ರಿ ಪೂಜೆ ವೇಳೆ ನಟಿ ಕಾಜೋಲ್​ ಆಕ್ರೋಶ! ಕಾರಣ ತಿಳಿದು ನೆಟ್ಟಿಗರಿಂದ ಭಾರಿ ಮೆಚ್ಚುಗೆ | Actress Kajol

ಮುಂಬೈ: ನವರಾತ್ರಿ ಹಿನ್ನೆಲೆಯಲ್ಲಿ ಇಡೀ ದೇಶವೇ ದುರ್ಗಾಪೂಜೆಯನ್ನು ಆಚರಿಸುತ್ತಿದೆ. ಇದು ಪಶ್ಚಿಮ ಬಂಗಾಳದ ಪ್ರಮುಖ ಹಬ್ಬವೂ ಹೌದು. ಈ ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ದೇಶದ ಮೂಲೆ ಮೂಲೆಯಲ್ಲೂ ದುರ್ಗಾ ಪೂಜೆಯ ಮಂಟಪಗಳು ಸಿದ್ಧವಾಗಿವೆ. ಸೆಲೆಬ್ರಿಟಿಗಳು ಕೂಡ ನವರಾತ್ರಿ ಪೂಜೆಯಲ್ಲಿ ಪಾಲ್ಗೊಳುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್​ ನಟಿ ಕಾಜೋಲ್ ( Actress Kajol ) ಪೂಜೆಯ ಸಂದರ್ಭದಲ್ಲಿ ಯಾವುದೋ ಅನುಚಿತ ಸಂಗತಿಯನ್ನು ನೋಡಿ ಕೋಪಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಗಮನ ಸೆಳೆಯುತ್ತಿದೆ.

ನಟಿ ಆಲಿಯಾ ಭಟ್ ಮತ್ತು ಅವರ ಸಹೋದರಿ ಶಾಹೀನ್ ಬಟ್ ಕೂಡ ಪೂಜೆಯಲ್ಲಿ ಉಪಸ್ಥಿತರಿದ್ದರು. ಸ್ವಲ್ಪ ಸಮಯದ ನಂತರ ಪೂಜೆ ಪ್ರಾರಂಭವಾಯಿತು. ಈ ವೇಳೆ ಪಾದರಕ್ಷೆಗಳನ್ನು ಧರಿಸಿದ ಕೆಲವರು ಮಂಟಪವನ್ನು ಪ್ರವೇಶಿಸಿ ದೇವಿಯ ಮೂರ್ತಿಯ ಬಳಿ ಬಂದರು. ಇದನ್ನು ನೋಡಿದ ಕಾಜೋಲ್ ತುಂಬಾ​ ಆಕ್ರೋಶಗೊಂಡು, ಸ್ಥಳದಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಪೂಜೆ ನಡೆಯುತ್ತಿದೆ ಸ್ವಲ್ಪ ಗೌರವ ಕೊಡಿ. ಯಾರು ಯಾರು ಶೂ ಧರಿಸಿದ್ದೀರಿ ಅದನ್ನು ಬಿಚ್ಚಿಡಿ ಎಂದು ಮೈಕ್​ ಮೂಲಕ ಆಕ್ರೋಶದಿಂದಲೇ ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ನೆಟ್ಟಿಗರು ಕಾಜೋಲ್ ನಡೆಯನ್ನು ಕಾಮೆಂಟ್​ ಮೂಲಕ ಪ್ರಶಂಸಿಸಿದ್ದಾರೆ. (ಏಜೆನ್ಸೀಸ್)