ಸಿನಿವಾಣಿ

'ಲಂಕಾಸುರ'ನಾದ ವಿನೋದ್ ಪ್ರಭಾಕರ್ ...

ಬೆಂಗಳೂರು: ವಿನೋದ್​ ಪ್ರಭಾಕರ್​ ಅಭಿನಯದ 'ಫೈಟರ್​', 'ಶ್ಯಾಡೋ', 'ರಾಬರ್ಟ್​​' ಮುಂತಾದ ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಮಧ್ಯೆ, ವಿನೋದ್​ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಅಭಿನಯಿಸಿದ್ದು, ಈ ಚಿತ್ರ ಸಂಕ್ರಾಂತ್ರಿಗೆ ಪ್ರಾರಂಭವಾಗಲಿದೆ.

ವಿನೋದ್​ ಅಭಿನಯದ ಹೊಸ ಚಿತ್ರದ ಹೆಸರು 'ಲಂಕಾಸುರ'. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಲಾಕ್​ಡೌನ್​ಗೂ ಮುನ್ನವೇ ಈ ಚಿತ್ರ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ತಡವಾದ ಈ ಚಿತ್ರ ಇದೀಗ ಸೆಟ್ಟೇರುವುದಕ್ಕೆ ಸಜ್ಜಾಗಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರ ಪ್ರಾರಂಭವಾಗಲಿದೆ.

'ಲಂಕಾಸುರ' ಚಿತ್ರವನ್ನು ಎ.ಎಂ.ಎಸ್​. ಪ್ರೊಡಕ್ಷನ್ಸ್​ ಸಂಸ್ಥೆಯಡಿ ಹೇಮಾವತಿ ಮುನಿಸ್ವಾಮಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಇನ್ನು, ಈ ಹಿಂದೆ 'ಮೂರ್ಕಲ್​ ಎಸ್ಟೇಟ್​' ಎಂಬ ಚಿತ್ರವನ್ನು ನಿರ್ದೇಶಿಸದ್ದ ಪ್ರಮೋದ್​ ಕುಮಾರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದು ಇವರ ನಿರ್ದೇಶನದ ಎರಡನೆಯ ಚಿತ್ರ.

ಪಾರ್ವತಿ ಅರುಣ್​ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್​ ಇತ್ತೀಚೆಗೆ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಮೂರು ದಿನಗಳಲ್ಲಿ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಈ ಚಿತ್ರಕ್ಕೆ ವಿಜೇತ್​ ಕೃಷ್ಣ ಸಂಗೀತ ಸಂಯೋಜಿಸಿದ್ದು, ಸುಜ್ನಾನ್​ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರದ ಇನ್ನುಳಿದ ಕಲಾವಿದರು ಆಯ್ಕೆ ಸದ್ಯದಲ್ಲೇ ಆಗಲಿದೆ.