ಸಿನಿವಾಣಿ

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ವಿಜಯ್​ ದೇವರಕೊಂಡ ನೂತನ ದಾಖಲೆ

manjunathktgns

ಇತ್ತೀಚೆಗಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದಿದ್ದರು. ಬರೋಬ್ಬರಿ 50 ಮಿಲಿಯನ್​ ಫಾಲೋವರ್ಸ್ ಹೊಂದಿದ ಪಟ್ಟಿಯಲ್ಲಿ ಸ್ಥಾನಪಡೆದಿದ್ದರು. ಇದೀಗ ದಕ್ಷಿಣ ಭಾರತದ ಖ್ಯಾತ ನಟ ವಿಜಯ್​ ದೇವರಕೊಂಡ ಸಹ ಅದೇ ಇನ್​ಸ್ಟಾಗ್ರಾಂನಲ್ಲಿ ದಾಖಲೆ ಬರೆದಿದ್ದಾರೆ.

ಸೌತ್​ ಸಿನಿಮಾರಂಗದಲ್ಲಿ ಘಟಾನುಘಟಿ ಸ್ಟಾರ್​ ನಟರಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಅಪಾರ ಪ್ರಮಾಣದ ಫ್ಯಾನ್​ ಫಾಲೋವರ್ಸ್​ ಹೊಂದಿದ್ದಾರೆ. ಇದೀಗ ಅರ್ಜುನ್​ ರೆಡ್ಡಿ ಮೂಲಕ ಮನೆಮಾತಾದ ವಿಜಯ್​ ದೇವರಕೊಂಡ, ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 8 ಮಿಲಿಯನ್​ ಫಾಲೋವರ್ಸ್ ಹೊಂದಿ, ದಕ್ಷಿಣ ಭಾರತದ ಸಿನಿಮಾ ನಟರ ಸಾಲಿನಲ್ಲಿ ಮೊದಲ ಪಟ್ಟಿಯಲ್ಲಿದ್ದಾರೆ.

ಇನ್ನು ಅಲ್ಲು ಅರ್ಜುನ್​ 7.6 ಮಿಲಿಯನ್​, ಮಹೇಶ್ ಬಾಬು 5.2 ಮಿಲಿಯನ್​, ಪ್ರಬಾಸ್​ 4.8 ಮಿಲಿಯನ್​, ರಾಣಾ ದಗ್ಗುಬಾಟಿ 4 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಲ್ಲೂ ಹಲವು ನಾಯಕ ನಟರು ಇನ್​ಸ್ಟಾಗ್ರಾಂನಲ್ಲಿ ಮಿಲಿಯನ್​ ಪಟ್ಟಿ ಸೇರಿದ್ದಾರೆ. (ಏಜೆನ್ಸೀಸ್​)