More

    ‘ಫ್ರೆಂಚ್​ ಬಿರಿಯಾನಿ’ ಟ್ರೈಲರ್​ ಬಂತು … ನೀವೂ ರುಚಿ ನೋಡಿ …

    ‘ಹಂಬಲ್​ ಪೊಲಿಟೀಶಿಯನ್​ ನೊಗರಾಜ್​’ ನಂತರ ಡ್ಯಾನಿಶ್​ ಸೇಠ್​ ಹೀರೋ ಆಗಿ ನಟಿಸಿರುವ ‘ಫ್ರೆಂಚ್​ ಬಿರಿಯಾನಿ’ ಚಿತ್ರವು ಇದೇ 24ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಚಿತ್ರದ ಮೊದಲ ಟ್ರೈಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಅರ್ಜುನ್​ -ಮಲೈಕಾ ಮದುವೆಗೆ ಸೋನಮ್​ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?

    ಡ್ಯಾನಿಶ್ ಸೇಠ್ ಈ ಚಿತ್ರದಲ್ಲಿ ಬೆಂಗಳೂರಿನ ಆಟೋಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಪಾತ್ರದಲ್ಲಿ ಸಾಲ್ ಯೂಸುಫ್ ಸೈಮನ್ ಪಾತ್ರಧಾರಿಯಾಗಿ ನಟಿಸಿದ್ದಾರೆ.ಸೈಮನ್ ಕಳೆದುಕೊಂಡಿರುವ ವಸ್ತುವನ್ನು ಹುಡುಕುವ ಸಲುವ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಸೈಮನ್ ಹಾಗೂ ಅಸ್ಗರ್ ಭೇಟಿಯಾಗುತ್ತಾರೆ. ಆ ನಂತರ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ.

    ‘ಫ್ರೆಂಚ್​ ಬಿರಿಯಾನಿ’ ಚಿತ್ರವನ್ನು ಪನ್ನಗಾಭರಣ ಅವರು ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಮಾತನಾಡುವ ಪನ್ನಗಾಭರಣ, ‘ಇದೊಂದು ಕಾಮಿಡಿ ಥ್ರಿಲ್ಲರ್​ ಆಗಿದ್ದು, ಪ್ರೇಕ್ಷಕರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸಲಿದೆ. ಈ ಚಿತ್ರ ಏಕಕಾಲಕ್ಕೆ 200 ದೇಶಗಳಲ್ಲಿ ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಇನ್ನೊಂದು ಖುಷಿಯ ವಿಚಾರ. ಇದರ ಮೂಲಕ ನಾವು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತಿರುವುದು ಒಂದು ಖುಷಿಯ ಸಂಗತಿ’ ಎನ್ನುತ್ತಾರೆ ಪನ್ನಗಾಭರಣ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಪ್ರಕರಣ ಸಿಬಿಐಗೆ ನೀಡಿ; ಅಮಿತ್​ ಶಾ ಹೇಳಿದ್ದೇನು?

    ಪುನೀತ್​ ಅವರ ಪಿ.ಆರ್​.ಕೆ. ಪ್ರೊಡಕ್ಷನ್​ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣವಾಗಿದೆ. ಈ ಹಿಂದೆ ಪುನೀತ್​ ನಿರ್ಮಿಸಿದ್ದ ‘ಕವಲು ದಾರಿ’ ಮತ್ತು ‘ಮಾಯಾ ಬಜಾರ್​’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ನಂತರ ಅಮೇಜಾನ್​ ಪ್ರೈಮ್​ನಲ್ಲಿ ಕಾಣಿಸಿಕೊಂಡಿದ್ದವು. ಆದರೆ, ಈ ಬಾರಿ ‘ಲಾ’ ಮತ್ತು ‘ಫ್ರೆಂಚ್​ ಬಿರಿಯಾನಿ’ ಚಿತ್ರಗಳು ಚಿತ್ರಮಂದಿರಗಳಿಗಿಂತ ಮುಂಚಿತವಾಗಿ ನೇರವಾಗಿ ಅಮೇಹಾನ್​ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ.

    ಡ್ಯಾನಿಶ್ ಜತೆಗೆ, ಸಾಲ್ ಯೂಸಫ್​, ರಂಗಾಯಣ ರಘು, ದಿಶಾ ಮದನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಸಾಲು ಸಾಲು ವೆಬ್​ಸಿರೀಸ್​ ಮತ್ತು ಸಿನಿಮಾಗಳನ್ನು ಘೋಷಣೆ ಮಾಡಿದ ನೆಟ್​ಫ್ಲಿಕ್ಸ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts