ಸಿನಿವಾಣಿ

ಕೆಲಸಕ್ಕೆ ಮರಳಿದ ಸಿಂಹಪ್ರಿಯಾ; 'ಎವರು' ರೀಮೇಕ್​ನ ಡಬ್ಬಿಂಗ್​ನಲ್ಲಿ ಭಾಗಿ …

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಮುಗಿದಿದೆ. ಇಬ್ಬರೂ 2023ರ ಫೆಬ್ರವರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ಮಧ್ಯೆ, ಇಬ್ಬರೂ ಕೆಲಸಕ್ಕೆ ಮರಳಿದ್ದು, ಡಬ್ಬಿಂಗ್​ ಕೆಲಸದಲ್ಲಿ ನಿರತರಾಗಿದ್ದಾರೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರೂ, ತೆಲುಗಿನ 'ಎವಡು' ಚಿತ್ರದ ಕನ್ನಡ ರೀಮೇಕ್​ನಲ್ಲಿ ನಟಿಸಿದ್ದಾರೆ. ಅವರಿಬ್ಬರ ನಡುವೆ ಚಿತ್ರೀಕರಣ ಸಮಯದಲ್ಲಿ ಪ್ರೇಮಾಂಕುರವಾಯಿತು ಎಂದು ಹೇಳಲಾಗುತ್ತದೆ. ಈಗ ಚಿತ್ರದ ಚಿತ್ರೀಕರಣ ಮುಗಿದಿದ್ದು, ಅವರಿಬ್ಬರು ನಿಶ್ಚಿತಾರ್ಥವಾಗಿರುವ ಸುದ್ದಿ ಸಹ ಹೊರಬಿದ್ದಿದೆ.

ಈ ಮಧ್ಯೆ, ಚಿತ್ರದ ಡಬ್ಬಿಂಗ್​ ನಡೆಯುತ್ತಿದ್ದು, ಹರಿಪ್ರಿಯಾ ಮತ್ತು ವಸಿಷ್ಠ ಡಬ್ಬಿಂಗ್​ನಲ್ಲಿ ಭಾಗವಹಿಸಿದ್ದಾರೆ. ಈ ಚಿತ್ರದಲ್ಲಿ ದಿಗಂತ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಹೆಸರು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.