ಸಿನಿವಾಣಿ

ಯಶ್ ಹುಟ್ಟುಹಬ್ಬ ‘ಯುಐ’ ಟೀಸರ್! ವಿಭಿನ್ನ ರೀತಿಯಲ್ಲಿ ರಿಲೀಸ್ ದಿನಾಂಕ ಘೋಷಣೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ಯುಐ’. ‘ಉಪ್ಪಿ 2’ ರಿಲೀಸ್ ಆಗಿ ಎಂಟು ವರ್ಷಗಳ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ವಿಭಿನ್ನ ಶೀರ್ಷಿಕೆ, ಪೋಸ್ಟರ್‌ಗಳಿಂದ ಗಮನ ಸೆಳೆದಿದ್ದು, ಈ ಹಿಂದೆ ದೃಶ್ಯಗಳೇ ಇಲ್ಲದ ವಿಭಿನ್ನ ಟೀಸರ್ ರಿಲೀಸ್ ಮಾಡಲಾಗಿತ್ತು. ಹೊಸ ಪ್ರಯತ್ನಗಳನ್ನು ಮಾಡುವ ಉಪೇಂದ್ರ ನೋಡುವ ಟೀಸರ್ ಬದಲು ಕೇಳಿಸಿಕೊಳ್ಳುವ ಟೀಸರ್ ಬಿಡುಗಡೆ ಮಾಡಿದ್ದರು. ಅದೇ ರೀತಿ ಈಗ ಮತ್ತೊಂದು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರತಂಡ ವಾಪಸ್ಸಾಗಿದೆ. ಇತ್ತೀಚೆಗೆ ವಿಶೇಷ ವಿಡಿಯೊ ರಿಲೀಸ್ ಮಾಡಿ ಚಿತ್ರದ ಫಸ್ಟ್ ಲುಕ್ ಟೀಸರ್ ದಿನಾಂಕವನ್ನು ಡೀಕೋಡ್ ಮಾಡಿ ಎಂದು ಅಭಿಮಾನಿಗಳಿಗೆ ಸವಾಲು ನೀಡಲಾಗಿತ್ತು. ಆ ವಿಡಿಯೊದಲ್ಲಿ ಕುದುರೆ ಓಡುವ ಶಬ್ದ ಕೇಳಿಸಿದ್ದು ಬಿಟ್ಟರೆ ಬೇರೇನೂ ಇರಲಿಲ್ಲ.

ಡೀಕೋಡ್ ಮಾಡಿದ ಮೊದಲ 50 ಅಭಿಮಾನಿಗಳಿಗೆ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಪಾಸ್ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಟೀಸರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಕುದುರೆ ಓಡುವ ಸದ್ದಿನಲ್ಲಿ ಎಂಟು ಹೆಜ್ಜೆಗಳು ಶಬ್ದ ಕೇಳಿಬಂದಿದ್ದು, ಇದೇ ತಿಂಗಳ 8ಕ್ಕೆ ಅರ್ಥಾತ್ ನಟ ಯಶ್ ಹುಟ್ಟುಹಬ್ಬದಂದು ಬೆಳಗ್ಗೆ 11 ಗಂಟೆಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದಾರೆ.

Yash, Vishal, Srinidhi Shetty At The 'KGF' Press Meet In Chennai

ಅತ್ಯಾಧುನಿಕ ತಂತ್ರಜ್ಞಾನ
‘ಯುಐ’ ತಾಂತ್ರಿಕವಾಗಿಯೂ ವಿಶೇಷತೆಗಳಿಂದ ಕೂಡಿರಲಿದೆ. ಅಮೆರಿಕದ ವ್ಯಾಂಕೋವರ್ ಫಿಲಂ ಸ್ಕೂಲ್‌ನಲ್ಲಿ ವಿಎ್ಎಕ್ಸ್ ಕಲಿತಿರುವ ನುರಿತ ತಂತ್ರಜ್ಞರಾದ ನಿರ್ಮಲ್ ಕುಮಾರ್ ಹಾಗೂ ನವೀನ್ ಮನೋಹರ್ ಚಿತ್ರದ ವಿಎ್ಎಕ್ಸ್‌ನ ಜವಾಬ್ದಾರಿ ಹೊತ್ತಿದ್ದು, ಅಮೆರಿಕದ ರೇಡಿಯನ್ಸ್ ಎ್ಎಕ್ಸ್ ಮತ್ತು ಯೂನಿೈ ಮೀಡಿಯಾ ಜಂಟಿಯಾಗಿ ವಿಎ್ಎಕ್ಸ್ ಕೆಲಸಗಳನ್ನು ಮಾಡುತ್ತಿದ್ದಾರೆ. ಜತೆಗೆ ವಿಆರ್ ಮೊಕೊಬಾಟ್, ಥ್ರೀಡಿ ಸ್ಕಾೃನಿಂಗ್, ವರ್ಚುವಲ್ ಪೈಪ್‌ಲೈನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಅಲ್ಲದೆ, ವಿಎ್ಎಕ್ಸ್ ಸೆಟ್ ಹಾಕಲಾಗಿದ್ದು, 1,400ಕ್ಕೂ ಅಧಿಕ ವಿಎ್ಎಕ್ಸ್ ಶಾಟ್‌ಗಳು ಚಿತ್ರದಲ್ಲಿ ಕಾಣಬಹುದು ಎನ್ನಲಾಗಿದೆ.

ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬಿಜಿ:
ಚಿತ್ರೀಕರಣದ ಜತೆಜತೆಯಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗತ್ತಿತ್ತು. ಕಳೆದ ಡಿಸೆಂಬರ್‌ನಲ್ಲಿ ಅದ್ದೂರಿ ಹಾಡಿನ ಚಿತ್ರೀಕರಣದೊಂದಿಗೆ ಶೂಟಿಂಗ್ ಪೂರ್ಣಗೊಳಿಸಿದ ತಂಡ ಸದ್ಯ ಪೂರ್ತಿಯಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ‘ಯುಐ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ. ‘ಯುಐ’ ವಿಶೇಷತೆ ಎಂದರೆ ಕನ್ನಡದ ಜತೆ ತೆಲುಗು ಭಾಷೆಯಲ್ಲೂ ಉಪೇಂದ್ರ ಅವರೇ ಡಬ್ಬಿಂಗ್ ಮಾಡಿದ್ದಾರೆ.