ಸಿನಿವಾಣಿ

ಒಂದೇ ದಿನ ಎರಡು ಟೀಸರ್!; ವಿನಯ್ ರಾಜಕುಮಾರ್ ಬರ್ತ್​ಡೇ ಗಿಫ್ಟ್​..

Webdesk - Ravikanth

ಬೆಂಗಳೂರು: ವಿನಯ್ ರಾಜಕುಮಾರ್ ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು ಮತ್ತು ಸ್ನೇಹಿತರು ಅವರಿಗೆ ಏನೆಲ್ಲ ಉಡುಗೊರೆಗಳನ್ನು ಕೊಟ್ಟರೋ ಗೊತ್ತಿಲ್ಲ. ಆದರೆ, ಅವರು ಅಭಿನಯಿಸಿರುವ ‘ಅಂದೊಂದಿತ್ತು ಕಾಲ’ ಮತ್ತು ‘ಪೆಪೆ’ ಚಿತ್ರತಂಡದವರು, ಟೀಸರ್​ಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ಎರಡೂ ಚಿತ್ರಗಳು ವಿನಯ್ ಪಾಲಿಗೆ ವಿಭಿನ್ನವಾದ ಚಿತ್ರಗಳು.

‘ಅಂದೊಂದಿತ್ತು ಕಾಲ’ದಲ್ಲಿ ವಿನಯ್ ಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡರೆ, ‘ಪೆಪೆ’ಯಲ್ಲಿ ರಫ್ ಆಂಡ್ ಟಫ್ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಒಂದಿಷ್ಟು ಆಹ್ಲಾದಕರ ದೃಶ್ಯಗಳಿದ್ದರೆ, ಎರಡನೆಯದರಲ್ಲಿ ನೋವಿದೆ. ಈ ಚಿತ್ರಗಳು ಚಿತ್ರೀಕರಣ ಮುಗಿದಿದ್ದು, ಇದೇ ವರ್ಷ ಬಿಡುಗಡೆಯಾಗಲಿವೆ.