ಸಿನಿವಾಣಿ

ತ್ರಿಕೋನ ಪ್ರೇಮಕಥೆಯ ಸಿಂಧೂರ

Webdesk - Ravikanth
ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ತ್ರಿಕೋನ ಪ್ರೇಮಕಥೆಗಳಿರುವ ಚಿತ್ರಗಳು ಬಿಡುಗಡೆಯಾಗಿವೆ. ಆ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ‘ಸಿಂಧೂರ’. ಸಚಿನ್ ಪುರೋಹಿತ್, ನಿವೀಕ್ಷಾ ನಾಯ್ಡು, ಸುರಕ್ಷಿತಾ ಶೆಟ್ಟಿ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಮುಗಿದು ಕೆಲವು ಸಮಯವೇ ಆಗಿದೆ. ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಇತ್ತೀಚೆಗೆ ಹಾಡುಗಳು ಬಿಡುಗಡೆಯಾಗಿವೆ.

ಈ ಚಿತ್ರಕ್ಕೆ ಸಚಿನ್ ಪುರೋಹಿತ್ ಬರೀ ಹೀರೋ ಅಷ್ಟೇ ಅಲ್ಲ. ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಈ ಚಿತ್ರದ ಕಥೆಯನ್ನು ಅವರ ತಂದೆ ದಿ. ರಾಮ್ ಪುರೋಹಿತ್ ಬರೆದಿದ್ದಾರಂತೆ. ಎಂಟು ವರ್ಷಗಳ ಹಿಂದೆ ಅವರು ಬರೆದ ಕಥೆಯನ್ನು ಈಗ ತೆರೆಗೆ ತರುತ್ತಿದ್ದಾರೆ.

ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇಬ್ಬರು ನಾಯಕಿಯರ ಪೈಕಿ ನಾಯಕ ಯಾರಿಗೆ ಒಲಿಯುತ್ತಾನೆ ಎನ್ನುವುದು ಚಿತ್ರದ ಕಥೆ ಎನ್ನುತ್ತಾರೆ. ‘ಸಿಂಧೂರ’ದಲ್ಲಿ ಬ್ಯಾಂಕ್ ಜನಾರ್ದನ್, ರೇಖಾ ದಾಸ್, ಅರುಣ್ ದೇವಸ್ಯ ಮುಂತಾದವರು ನಟಿಸಿದ್ದಾರೆ.

https://www.vijayavani.net/rgv-challenge-to-bollywood-stars/