ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಕಥೆ ಒಳಗೊಂಡಿವೆ. ಆ ಸಿನಿಮಾಗಳಿಗಿಂತ ತೀರ ವಿಭಿನ್ನ ಎನ್ನಬಹುದಾದ ಚಿತ್ರವೊಂದು ತೆರೆಗೆ ಬರಲು ಸಿದ್ದವಿದೆ. ಅದೇ ‘ಮೋಕ್ಷ’. ಅದಕ್ಕೂ ಮೊದಲು ಇದೇ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಿಗ್ಬಾಸ್ನಿಂದ ಹೊರಬರುತ್ತಿದ್ದಂತೆಯೇ ಧನುಶ್ರೀಗೆ ಸಿಗ್ತು ಬಿಗ್ ಚಾನ್ಸ್! ಮತ್ತೆ ಮೋಡಿ ಮಾಡ್ತಾರಾ ಈ ಟಿಕ್ಟಾಕ್ ಸ್ಟಾರ್?
ಜಾಹೀರಾತುಗಳನ್ನು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿರಿತೆರೆಯಲ್ಲಿ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರದ ನಿರ್ಮಾಪಕರೂ ಸಮರ್ಥ್ ಅವರೇ. ನೋಡುಗರನ್ನು ಕುತೂಹಲ ಮೂಡಿಸುವ, ರೋಚಕ, ಭಯಾನಕ, ನಿಗೂಢ ಕಥೆಯುಳ್ಳ ಸ್ಸಸ್ಪೆನ್ಸ್ ಸಿನಿಮಾ ‘ಮೋಕ್ಷ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಅನ್ನೋ ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದು, ಅದು ಎಲ್ಲರ ಗಮನ ಸೆಳೆಯಲಿದೆ ಎಂದೂ ಹೇಳಿಕೊಳ್ಳುತ್ತಾರವರು. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ.
ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದವರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ.