ರಾಕಾದಲ್ಲಿ ವಿಲನ್ ಪಾತ್ರದಲ್ಲಿ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್?
- ಅಲ್ಲು ಅರ್ಜುನ್ ನಟನೆಯ, ಅಟ್ಲೀ ನಿರ್ದೇಶನದ ಸಿನಿಮಾ ರಾಕಾ
- ರಾಕಾದಲ್ಲಿ ವಿಲನ್ ಪಾತ್ರದಲ್ಲಿ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್
- ಖ್ಯಾತನಾಮ ತಾರೆಯರೇ ತುಂಬಿರುವ ಸಿನಿಮಾ ರಾಕಾ
ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಬಹು ನೀರಿಕ್ಷಿತ ಸಿನಿಮಾ ರಾಕಾದಲ್ಲಿ ಹಾಲಿವುಡ್ನ ಖ್ಯಾತ ನಟ ವಿಲ್ ಸ್ಮಿತ್ (Will Smith in Raaka) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ.
ಭಾರತದ ಸಿನಿಮಾಗಳನ್ನು ಜಾಗತಿಕ ಮಟ್ಟದ ವೀಕ್ಷಕರನ್ನು ತಲುಪಿಸುವ ಉದ್ದೇಶದಿಂದ ಈ ಕೆಲಸಕ್ಕೆ ನಿರ್ದೇಶಕ ಅಟ್ಲೀ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ರಾಕಾದಲ್ಲಿ ವಿಲ್ ಸ್ಮಿತ್ ವಿಲನ್?
ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ರಾಕಾ ಸಿನಿತಂಡ ಈಗಾಗಲೇ ವಿಲ್ ಸ್ಮಿತ್ ಅವರನ್ನು ಬೇಟಿ ಮಾಡಿದ್ದು, ಸಿನಿಮಾ ಬಗ್ಗೆ, ಅಲ್ಲಿರುವ ಪಾತ್ರಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
ಹಾಲಿವುಡ್ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ವಿಲ್ ಸ್ಮಿತ್ ಆಗಮನದಿಂದ ಭಾರತದ ಸಿನಿಮಾಗೆ ಜಾಗತಿಕ ಮನ್ನಣೆ ದೊರೆಯಲಿದೆ ಎನ್ನುವುದು ಸಿನಿಮಾ ತಂಡದವರ ಲೆಕ್ಕಾಚಾರವಾಗಿದೆ.
ಹೀಗಾಗಿ, ವಿಲ್ ಸ್ಮಿತ್ ಅವರಿಗೆ ಸಿನಿಮಾದಲ್ಲಿ ಖಳನಾಯಕನ ಪಾತ್ರವನ್ನು ನೀಡಲು ಅಟ್ಲೀ ಮುಂದಾಗಿದ್ದು, ಈ ಕುರಿತು ಕಳೆದ ಒಂದು ವರ್ಷದಿಂದ ಮಾತುಕತೆ ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಆದರೆ ಈ ವರೆಗೆ ಸಿನಿಮಾ ತಂಡದವರಾಗಲೀ ಅಥವಾ ವಿಲ್ ಸ್ಮಿತ್ ಆಗಲೀ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ತಾರಾಗಣ ತುಂಬಿರುವ ಸಿನಿಮಾ
ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾವಾಗಿದ್ದು, ಅಲ್ಲು ಅರ್ಜುನ್ ನಾಲ್ಕು ಪಾತ್ರಗಳಲ್ಲಿ ಕಾಣಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ರಾಕಾದಲ್ಲಿ ದೀಪಿಕಾ ಪಡುಕೋಣೆ, ಜನ್ವಿ ಕಪೂರ್, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾವನ್ನು ಸನ್ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದೆ, (ಏಜನ್ಸೀಸ್).