ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ 
ಟಾಲಿವುಡ್

ವಿಜಯ್ ಕೊಂಕು ಮಾತಿಗೆ ವೇದಿಕೆಯಲ್ಲೇ ಕಣ್ಣೀರಿಟ್ರಾ ರಶ್ಮಿಕಾ? 'ಕಾಫಿ ವಿತ್ ಕರಣ್' ಸೆಟ್‌ನಲ್ಲಿ ಹೈಡ್ರಾಮಾ, 1 ಗಂಟೆ ಶೂಟಿಂಗ್ ಬಂದ್! Rashmika Mandanna

ಇತ್ತೀಚೆಗೆ ಈ ತಾರಾದಂಪತಿ ಖ್ಯಾತ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್ 9' (Koffee With Karan 9) ಶೋಗೆ ಅತಿಥಿಗಳಾಗಿ ಆಗಮಿಸಿದ್ದರು. ಶೋನಲ್ಲಿ ವಿಜಯ್ ದೇವರಕೊಂಡ ಆಡಿದ ಕೆಲವು ಮಾತುಗಳು ಹಾಗೂ ತೋರಿದ ನಡವಳಿಕೆ ರಶ್ಮಿಕಾ ಅಭಿಮಾನಿಗಳಿಗೆ ಅಕ್ಷರಶಃ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಶೋ ಪ್ರಸಾರವಾದ ಬೆನ್ನಲ್ಲೇ ವಿಜಯ್ ಅವರ ಹಾವಭಾವವನ್ನು ಕಂಡು ಅನೇಕರು ಅವರನ್ನು 'ರೆಡ್ ಫ್ಲ್ಯಾಗ್' (ಕೆಟ್ಟ ನಡವಳಿಕೆ) ಎಂದು ಕರೆದಿದ್ದಾರೆ.

ಮುಂಬೈ: ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ( Rashmika Mandanna ) ಜೋಡಿಯ ಮದುವೆಯ ಮೆಹಂದಿ ಬಣ್ಣ ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ದೊಡ್ಡ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಟ್ವಿಟರ್​, ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿದಂತೆ ಯಾವುದೇ ಜಾಲತಾಣ ವೇದಿಕೆ ಓಪನ್​ ಮಾಡಿದರೂ ರಶ್ಮಿಕಾ-ವಿಜಯ್​ರದ್ದೇ ಸುದ್ದಿ. ಅಷ್ಟಕ್ಕೂ ಈ ತಾರಾದಂಪತಿಯ ನಡುವೆ ಏನಾಯ್ತು? ಇಬ್ಬರ ನಡುವೆ ನಿಜವಾಗಿಯೂ ವೈಮನಸ್ಸು ಮೂಡಿದೆಯಾ? ವಿಜಯ್​ ವರ್ತನೆಯಿಂದ ರಶ್ಮಿಕಾ ಕಣ್ಣೀರಿಟ್ಟರಾ? ಏನಿದು ಡಿವೋರ್ಸ್​ ವದಂತಿ? ಈ ಕುರಿತಾದ ಒಂದು ಸಮಗ್ರ ವರದಿ ಇಲ್ಲಿದೆ.​

ಇತ್ತೀಚೆಗೆ ಈ ತಾರಾದಂಪತಿ ಖ್ಯಾತ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್ 9' (Koffee With Karan 9) ಶೋಗೆ ಅತಿಥಿಗಳಾಗಿ ಆಗಮಿಸಿದ್ದರು. ಶೋನಲ್ಲಿ ವಿಜಯ್ ದೇವರಕೊಂಡ ಆಡಿದ ಕೆಲವು ಮಾತುಗಳು ಹಾಗೂ ತೋರಿದ ನಡವಳಿಕೆ ರಶ್ಮಿಕಾ ಅಭಿಮಾನಿಗಳಿಗೆ ಅಕ್ಷರಶಃ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಶೋ ಪ್ರಸಾರವಾದ ಬೆನ್ನಲ್ಲೇ ವಿಜಯ್ ಅವರ ಹಾವಭಾವವನ್ನು ಕಂಡು ಅನೇಕರು ಅವರನ್ನು 'ರೆಡ್ ಫ್ಲ್ಯಾಗ್' (ಕೆಟ್ಟ ನಡವಳಿಕೆ) ಎಂದು ಕರೆದಿದ್ದಾರೆ.

ಈ ಎಲ್ಲ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದು ವಿಜಯ್ ದೇವರಕೊಂಡ ಅವರ ಇನ್​ಸ್ಟಾಗ್ರಾಂ ಖಾತೆ. ಅದೇನೆಂದರೆ, ವಿಜಯ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಕನಿಷ್ಠ ಪಕ್ಷ ತಮ್ಮ ಪತ್ನಿಯನ್ನಾದರೂ ಫಾಲೋ ಮಾಡಬೇಕಿತ್ತು. ಆದರೆ, ಅವರನ್ನು ಸಹ ಫಾಲೋ ಮಾಡುತ್ತಿಲ್ಲ. ಆದರೆ, ರಶ್ಮಿಕಾ ಮಾತ್ರ ವಿಜಯ್​ ಅವರನ್ನು ಫಾಲೋ ಮಾಡುತ್ತಿದ್ದಾರೆ. ವಿಜಯ್​ನ ಅವರ ಈ ಒಂದು ನಡೆಯ ಮೇಲೆ ಅನುಮಾನ ಮೂಡುತ್ತಿದೆ. ರಶ್ಮಿಕಾ ಅಂದರೆ ವಿಜಯ್​ಗೆ ಇಷ್ಟವಿಲ್ಲವಾ? ಬಲವಂತಕ್ಕೆ ರಶ್ಮಿಕಾರನ್ನು ವಿಜಯ್​ ಮದುವೆಯಾದರಾ? ಅನ್ನೋ ಅನುಮಾನ ಕೂಡ ತುಂಬಾ ಬಲವಾಗುತ್ತಿದೆ.

ಇನ್ನು ಶೋ ಮಧ್ಯೆ ವಿಜಯ್ ನೀಡಿದ ಕೆಲವು ಹೇಳಿಕೆಗಳು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿವೆ. ತನ್ನನ್ನು ಮದುವೆಯಾಗುವಂತೆ ರಶ್ಮಿಕಾ ಬರೋಬ್ಬರಿ '100 ಬಾರಿ' ಕೇಳಿಕೊಂಡರು ಎಂದು ವಿಜಯ್ ಅವರು ಶೋನಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ, ರಶ್ಮಿಕಾ ಹೇಳಿದ್ದು 100 ಬಾರಿಯಲ್ಲ ಇಡೀ ವರ್ಷ ಮದುವೆಯಾಗುವಂತೆ ವಿಜಯ್​ ಹಿಂದೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಈ ಮಾತನ್ನು ಆಡುವಾಗ ವಿಜಯ್​ ತೋರಿದ ಹಾವಾಭಾವ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ರಶ್ಮಿಕಾಗೆ ನೀಡಿದ ಮದುವೆ ಉಂಗುರದ ಬಗ್ಗೆಯೂ ಹಗುರವಾಗಿ ಮಾತನಾಡಿ, "ಅದು ನನ್ನ ಸ್ಟೈಲ್​" ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ವಿಜಯ್ ಅವರ ಈ ನಡವಳಿಕೆಯು ರಶ್ಮಿಕಾರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಕಾಣುತ್ತಿತ್ತು ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಈ ಚರ್ಚೆಗೆ ಮತ್ತಷ್ಟು ಬೆಂಕಿ ಹಚ್ಚುವಂತೆ 'ರೆಡ್ಡಿಟ್' (Reddit) ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಹೊಸ ಬಾಂಬ್ ಸಿಡಿಸಿದೆ. 'ಕಾಫಿ ವಿತ್ ಕರಣ್' ಶೋನ ಶೂಟಿಂಗ್ ವೇಳೆ ಉಪಸ್ಥಿತರಿದ್ದ ಸಿಬ್ಬಂದಿಯೊಬ್ಬರು ಹಂಚಿಕೊಂಡಿದ್ದಾರೆ ಎನ್ನಲಾದ ಮಾಹಿತಿಯ ಪ್ರಕಾರ, ವಿಜಯ್ ಅವರ ನಡವಳಿಕೆ ಮತ್ತು ಕಠಿಣ ಮಾತುಗಳಿಂದ ನೊಂದ ರಶ್ಮಿಕಾ ಮಂದಣ್ಣ ಶೋ ಸೆಟ್‌ನಲ್ಲೇ ಕಣ್ಣೀರಿಟ್ಟು ಭಾವುಕರಾಗಿದ್ದರಂತೆ. ಈ ಪರಿಸ್ಥಿತಿ ಕೈಮೀರುತ್ತಿದ್ದಂತೆ ನಿರೂಪಕ ಕರಣ್ ಜೋಹರ್ ಶೂಟಿಂಗ್ ಅನ್ನು ಸುಮಾರು ಒಂದು ಗಂಟೆಯ ಕಾಲ ಸ್ಥಗಿತಗೊಳಿಸಬೇಕಾಯಿತು ಮತ್ತು ಆ ಸಮಯದಲ್ಲಿ ವಿಜಯ್ ತಮ್ಮ ಪತ್ನಿಯನ್ನು ಸಮಾಧಾನಪಡಿಸಲು ಯತ್ನಿಸಿದರು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಆದಾಗ್ಯೂ, ಈ ವೈರಲ್ ಪೋಸ್ಟ್ ಮತ್ತು ಅದರಲ್ಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕರಣ್ ಜೋಹರ್ ಆಗಲಿ, ಕಾರ್ಯಕ್ರಮದ ನಿರ್ಮಾಣ ತಂಡವಾಗಲಿ ಅಥವಾ ವಿಜಯ್-ರಶ್ಮಿಕಾ ದಂಪತಿಯಾಗಲಿ ಶೂಟಿಂಗ್ ಸ್ಥಗಿತಗೊಂಡಿದ್ದರ ಬಗ್ಗೆ ಅಥವಾ ರಶ್ಮಿಕಾ ಸೆಟ್‌ನಲ್ಲಿ ಅತ್ತಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದ್ದರಿಂದ ಪ್ರಸ್ತುತ ಹರಿಡುತ್ತಿರುವ ಈ ಸುದ್ದಿಗಳು ಕೇವಲ ಸಾಮಾಜಿಕ ಜಾಲತಾಣಗಳ ಅನಧಿಕೃತ ವದಂತಿಗಳು ಮತ್ತು ಊಹಾಪೋಹಗಳಾಗಿಯೇ ಉಳಿದಿದ್ದು, ಮುಂದಿನ ದಿನಗಳಲ್ಲಿ ಈ ಜೋಡಿ ಈ ಬಗ್ಗೆ ಮೌನ ಮುರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).