ಸಿನಿವಾಣಿ

ಎಲೆಕ್ಟ್ರಿಕ್​ ಬೈಕ್​ ಸ್ಟಾರ್ಟ್​ಅಪ್​ ಶುರು ಮಾಡಿದ ನಟ ವಿಜಯ್​ ದೇವರಕೊಂಡ

ಹೈದರಾಬಾದ್​: ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಮನೆಮಾತಾದ ನಟ ವಿಜಯ್​ ದೇವರಕೊಂಡ, ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೆಲ್ಲದರ ಜತೆಗೆ ಹಲವು ಉದ್ಯಮದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ರೌಡಿ ಹೆಸರಿನ ಬಟ್ಟೆ ಬ್ರ್ಯಾಂಡ್​ ಶುರುಮಾಡಿದ್ದಾರೆ. ಇದೀಗ ವಾಹನಗಳ ವ್ಯಾಪಾರಕ್ಕೆ ಅಣಿಯಾಗುತ್ತಿದ್ದಾರೆ.

ಹೌದು, ಇತ್ತೀಚಿನ ದಿನಗಳಲ್ಲಿ ಇಂಧನದ ವಾಹನಗಳಿಗಿಂತ ಎಲೆಕ್ಟ್ರಿಕ್​ ವಾಹನಗಳಿಗೆ ಬೇಡಿಕೆ ಬಂದಿದೆ. ಹಾಗಾಗಿ ವಿಜಯ್​ ದೇವರಕೊಂಡ ವಿದ್ಯುತ್​ ಚಾಲಿತ ಬೈಕ್​ಗಳ ಸ್ಟಾರ್ಟ್​ಅಪ್​ ಶುರುಮಾಡಲಿದ್ದಾರೆ. ಹೈದರಾಬಾದ್​ನಲ್ಲಿ ಇನ್ನೇನು ಶೀಘ್ರದಲ್ಲಿ ಅದಕ್ಕೆ ಚಾಲನೆಯೂ ಸಿಗಲಿದೆ.

ಹಾಗಂತ ಇದು ವ್ಯಾಪಾರದ ಮಳಿಗೆಯಲ್ಲ. ಬದಲಿಗೆ ವಟ್ಸ್ ಮತ್ತು ವೊಲ್ಟ್​ಸ್ ಸ್ಟಾರ್ಟ್​ಅಪ್​ ಕಂಪನಿ ಜತೆ ವಿಜಯ್​ ಕೈ ಜೋಡಿಸಿದ್ದಾರೆ. ಕಿಲೋ ಮೀಟರ್ ಆಧಾರದಲ್ಲಿ ನಗರದಲ್ಲಿ ಸುತ್ತಾಡಲು ಈ ಎಲೆಕ್ಟ್ರಿಕ್​ ಬೈಕ್​ ಗಳು ಸಹಕಾರಿಯಾಗಲಿವೆ.

ವಿಶೇಷ ಏನೆಂದರೆ, ಇತ್ತಿಚೆಗಷ್ಟೇ ಸುಕುಮಾರ್ ಜತೆಗೆ ವಿಜಯ್​ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆ ಚಿತ್ರವನ್ನು ನಿರ್ಮಾಣ ಮಾಡಲಿರುವ ವಿಜಯ್ ಮದ್ದುರಿ ಮತ್ತು ವಂಶಿ ಕರುಮುಂಚಿ ಈ ಸ್ಟಾರ್ಟ್​ ಅಪ್​ ಶುರುಮಾಡಿದ್ದಾರೆ. ಇದರಲ್ಲಿ ವಿಜಯ್​ ದೇವರಕೊಂಡ ಅವರದ್ದು ಪಾಲುದಾರಿಕೆ ಇದೆ. (ಏಜೆನ್ಸೀಸ್​)