ಧಾರಾವಾಹಿಗಳ ಶೂಟಿಂಗ್ಗೆ ಅನುಮತಿ ಸಿಕ್ಕು ಒಂದು ತಿಂಗಳಾಯಿತು. ಎಲ್ಲಿಯೂ ಒಂದೇ ಒಂದು ಕರೊನಾ ಪಾಸಿಟಿವ್ ವರದಿಯಾದ ಪ್ರಕರಣ ಕಂಡು ಬಂದಿರಲಿಲ್ಲ. ಆದರೆ, ಇದೀಗ ಅದೂ ನಡೆದೇ ಬಿಟ್ಟಿದೆ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ, ಕರೊನಾ ಮಾರಿ ಸೀರಿಯಲ್ ರಂಗವನ್ನೂ ಪ್ರವೇಶಿಸಿ, ಎರಡು ಸೀರಿಯಲ್ಗಳ ಶೂಟಿಂಗ್ ಅನ್ನೇ ರದ್ದು ಮಾಡಿದೆ.
ಹೌದು, ಇದು ನಡೆದಿರುವುದು ಪಕ್ಕದ ಹೈದರಾಬಾದ್ನಲ್ಲಿ. ಅಲ್ಲಿನ ಖ್ಯಾತ ಧಾರಾವಾಹಿಯೊಂದರ ನಟನಿಗೆ ಕರೊನಾ ಪಾಸಿಟಿವ್ ವರದಿಯಾಗಿದ್ದು, ಇಡೀ ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅಷ್ಟೇ ಅಲ್ಲ ಪಾಸಿಟಿವ್ ಬಂದ ನಟ ಮತ್ತೆರಡು ಸೀರಿಯಲ್ಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಆ ತಂಡಗಳೂ ತಮ್ಮೆಲ್ಲ ಟೀಮ್ ಸದಸ್ಯರಿಗೆ ಕೋವಿಡ್ ಪರೀಕ್ಷೆ ಮಾಡಿಸಿದೆ.
ಇದನ್ನೂ ಓದಿ: PHOTOS| ಮಕ್ಕಳೊಂದಿಗೆ ಸನ್ನಿ ಲಿಯೋನ್ ಆಟ, ಸುತ್ತಾಟ
ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ. ತೆಲುಗು ಕಿರುತೆರೆಯ ನಿರ್ಮಾಪಕ ಸಂಘದ ಖಜಾಂಚಿಯಾಗಿರುವ ಕೆ. ರಮೇಶ್ ಬಾಬು, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಎಲ್ಲ ಧಾರಾವಾಹಿ ತಂಡಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಕೆಲ ಮೂಲಗಳ ಪ್ರಕಾರ, ಸೋಂಕಿಗೆ ಒಳಗಾಗಿರುವ ನಟ, ಇತ್ತೀಚೆಗಷ್ಟೇ ಹೈದರಾಬಾದ್ನಿಂದ ತಿರುಪತಿ ಟ್ರೇನ್ ಮೂಲಕ ಪ್ರಯಾಣಿಸಿದ್ದರು ಎನ್ನಲಾಗುತ್ತಿದೆ. (ಏಜೆನ್ಸೀಸ್)