ತಮಿಳು ನಟ ವಿಜಯ್ ದಳಪತಿ ಅಭಿನಯದ ‘ವಾರಿಸು’ ಹಾಗೂ ‘ಲಿಯೊ’ ಸಿನಿಮಾಗಳು ಕಳೆದ ವರ್ಷ ರಿಲೀಸ್ ಆಗಿದ್ದವು. ಇದೀಗ ಹೊಸ ವರ್ಷದ ಸಂಭ್ರಮದಲ್ಲಿ ವಿಜಯ್ ಅಭಿನಯದ 68ನೇ ಚಿತ್ರದ ಶೀರ್ಷಿಕೆ ಹಾಗೂ ಮೊದಲ ನೋಟ ರಿಲೀಸ್ ಮಾಡಲಾಗಿದೆ. ಈ ಹೊಸ ಸಿನಿಮಾ ‘ಮಂಕತ’, ‘ಮಾನಾಡು’ ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿಬರಲಿದೆ.
ಇದನ್ನೂ ಓದಿ : ಪೊಂಗಲ್ ಹಬ್ಬಕ್ಕೆ ಕ್ಯಾಪ್ಟನ್ ಮಿಲ್ಲರ್ ಫಿಕ್ಸ್ ; ಧನುಷ್ – ಶಿವಣ್ಣ ನಟಿಸಿರುವ ಚಿತ್ರ ಜ. 12ರಂದು ರಿಲೀಸ್
ಈಗಾಗಲೇ ಸುಮಾರು 13 ಸಿನಿಮಾಗಳನ್ನು ನಿರ್ದೇಶಿಸಿರುವ ವೆಂಕಟ್ ಪ್ರಭು ಮೊದಲ ಬಾರಿಗೆ ವಿಜಯ್‌ಗೆ ಆೃಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ‘ದಿ ಗ್ರೇಟೆಸ್ಟ್ ಆ್ ಆಲ್ ಟೈಮ್’ ಎಂದು ಹೆಸರಿಡಲಾಗಿದೆ. ವಯಸ್ಸಾದ ಲುಕ್‌ನಲ್ಲಿ ಹಾಗೂ ಯುವಕನಾಗಿ ಎರಡು ಶೇಡ್‌ಗಳಲ್ಲಿ ವಿಜಯ್ ಕಾಣಿಸಿಕೊಂಡಿದ್ದು, ಸಿನಿಮಾ ಎರಡು ಕಾಲಘಟ್ಟದಲ್ಲಿ ನಡೆಯಬಹುದೇ? ಅಥವಾ ದ್ವಿಪಾತ್ರ ಮಾಡುತ್ತಿದ್ದಾರಾ? ಎಂಬ ಕುತೂಹಲ ಮೂಡಿಸಿದೆ. ‘ಗೋಟ್’ ಟೈಟಲ್‌ಗೆ ‘ಬೆಳಕು ಕತ್ತಲೆಯನ್ನು ಕಬಳಿಸಬಹುದು ಆದರೆ ಕತ್ತಲು ಬೆಳಕನ್ನು ನುಂಗಲು ಸಾಧ್ಯವಿಲ್ಲ’ ಎಂಬ ಅಡಿಬರಹವಿದೆ.
ವಿಜಯ್ ಜತೆ ಪ್ರಶಾಂತ್, ಪ್ರಭುದೇವ, ಸ್ನೇಹಾ, ಮೀನಾಕ್ಷಿ ಚೌಧರಿ, ಲೈಲಾ, ಜಯರಾಮ್, ಮೋಹನ್, ಯೋಗಿ ಬಾಬು ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತ, ಸಿದ್ಧಾರ್ಥ್ ನುನಿ ಛಾಯಾಗ್ರಹಣ, ವೆಂಕಟ್ ರಾಜೇಶ್ ಸಂಕಲನವಿರಲಿದೆ.