ಸಿನಿವಾಣಿ

ತೈಮುರ್​ ಆಯಾ ಸಂಬಳ ಕೇಳಿದ್ರೆ ತಲೆ ತಿರುಗತ್ತೆ ...

ಬಾಲಿವುಡ್​ನ ಸೆಲೆಬ್ರಿಟಿ ಮಕ್ಕಳ ಪೈಕಿ ಅತ್ಯಂತ ಜನಪ್ರಿಯ ಎಂದರೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಮಗ ತೈಮುರ್​. ಪ್ರತಿ ದಿನ ತೈಮುರ್​ನ ಒಂದಲ್ಲಾ ಒಂದು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಮತ್ತು ತೈಮುರ್​ ಬಹಳ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ ಎಂದರೆ ತಪ್ಪಿಲ್ಲ.

ತೈಮುರ್​ನಂತೆಯೇ, ಅವನನ್ನು ನೋಡಿಕೊಳ್ಳುವ ಆಯಾ ಕೂಡಾ, ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಆಕೆಯ ಸಂಬಳ. ಮೂಲಗಳ ಪ್ರಕಾರ, ಸಾಫ್ಟ್​ವೇರ್​ ಇಂಜಿನಿಯರ್​ಗಳು ಮತ್ತು ದೊಡ್ಡದೊಡ್ಡ ಅಧಿಕಾರಿಗಳು ಸಹ ತೈಮುರ್​ ಆಯಾ ಪಡೆಯುವ ಸಂಬಳವನ್ನು ಪಡೆಯುವುದಿಲ್ಲವಂತೆ.

ಹಾಗಾದರೆ, ತೈಮುರ್​ ಆಯಾ ಸಾವಿತಿ ಅವರ ಸಂಬಳವೆಷ್ಟು ಎಂಬ ಪ್ರಶ್ನೆ ಬರಬಹುದು. ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿತು. ಅದು ಬೇಸಿಕ್​ ಸಂಬಳವಂತೆ. ಒಮ್ಮೊಮ್ಮೆ ಓವರ್​ಟೈಮ್​ ಆದರೆ, ಅದು ಎರಡು ಲಕ್ಷದವರೆಗೂ ಮುಟ್ಟುವ ಸಾಧ್ಯತೆ ಇದೆ. ದಿನದ ಬಹುಪಾಲು ಸಮಯವನ್ನು ಸಾವಿತಿ ಅವರು ತೈಮುರ್​ನ ನೋಡಿಕೊಳ್ಳುವುದರಲ್ಲೇ ಕಳೆಯುತ್ತಾರೆ. ಹೆಚ್ಚು ಸಮಯ ಕಳೆಯುತ್ತಿದ್ದಂತೆ, ಆಕೆಯ ಸಂಬಳ ಕೂಡಾ ಹೆಚ್ಚಾಗುತ್ತದೆ ಎನ್ನುವುದು ವಿಶೇಷ.

ಅದಕ್ಕೆ ಸರಿಯಾಗಿ, ಬಾಂದ್ರಾ ಪ್ರದೇಶದಲ್ಲಿ ಸಾವಿತಿ ಅನೇಕ ಬಾರಿ ತೈಮುರ್​ ಜತೆಗೆ ಓಡಾಡುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಸಿಗುತ್ತವೆ. ಬರೀ ಮನೆಯಲ್ಲಿದ್ದಾಗಲಷ್ಟೇ ಅಲ್ಲ, ಕೆಲವೊಮ್ಮೆ ಸೈಫ್​ ಮತ್ತು ಕರೀನಾ ವಿದೇಶ ಪ್ರವಾಸಕ್ಕೆ ಹೋದಾಗಲೂ, ತೈಮುರ್​ನನ್ನು ನೋಡಿಕೊಳ್ಳುವುದಕ್ಕೆ ಸಾವಿತಿ ಅವರನ್ನು ಕರೆದುಕೊಂಡು ಹೋಗುತ್ತಾರಂತೆ.

ಇದನ್ನೂ ಓದಿ: PHOTO: ಅಬುದಾಬಿಯಲ್ಲಿ ಕೆಜಿಎಫ್​ ಬೆಡಗಿ ಮೌನಿ ರಾಯ್​ ಹಾಟ್​ ಅವತಾರ ಹೇಗಿದೆ ನೋಡಿ…

ಈ ಬಗ್ಗೆ ಕರೀನಾ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಮಗನನ್ನು ಬೇರೆಯವರೊಂದಿಗೆ ಬಿಟ್ಟು, ಬಿಂದಾಸ್​ ಆಗಿ ಓಡಾಡಿಕೊಂಡಿರುವುದಕ್ಕೆ ಸಾಕಷ್ಟು ಬಾರಿ ನೆಟ್ಟಿಗರಿಂದ ಕೆಟ್ಟ ಮಾತುಗಳನ್ನು ಕೇಳಿದ್ದಾರೆ. ಆದರೆ, ಕರೀನಾ ಈ ಬಗ್ಗೆ ಯಾವತ್ತೂ ಬೇಸರಿಸಿಕೊಂಡಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾವಿತಿ ಅವರಿಗೆ ಕೊಡುವ ಸಂಬಳದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ.

ಇತ್ತೀಚೆಗೆ ಅರ್ಬಾಜ್​ ಖಾನ್​ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ, ಕರೀನಾಗೆ ಸಾವಿತಿ ಅವರ ಸಂಬಳದ ಬಗ್ಗೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಅವರು, 'ಮಗು ಸುರಕ್ಷಿತವಾಗಿದ್ದರೆ ಅಷ್ಟೇ ಸಾಕು. ಅಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ' ಎಂದು ಎಲ್ಲರ ಬಾಯಿ ಮುಚ್ಚಿಸಿದ್ದರು.