ಸುಶಾಂತ್ ಸಿಂಗ್ ರಜಪೂತ್ಗೆ 50 ಆಸೆಗಳಿದ್ದವಂತೆ ಎಂಬ ವಿಷಯ ಗೊತ್ತೇ ಇದೆ. ಅದರಲ್ಲಿ 10 ಸಾವಿರ ಗಿಡಗಳನ್ನು ನೆಡಬೇಕೆಂಬ ಆಸೆಯನ್ನು ಹೇಗಾದರೂ ಮಾಡಿ ಪೂರೈಸುವುದಕ್ಕೆ, ಸುಶಾಂತ್ ಸಿಂಗ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಇತ್ತೀಚೆಗಷ್ಟೇ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಗೀತು ‘ಕಡಲತೀರದ ಭಾರ್ಗವ’ ಚಿತ್ರದ ಶೂಟಿಂಗ್
ಈಗ ಸುಶಾಂತ್ ಅವರ ಇನ್ನೊಂದು ಆಸೆಯನ್ನು ಪ್ರೀತಿ ಶೀಲ್ ಸಿಂಗ್ ಎನ್ನುವವರು ಬಿಚ್ಚಿಟ್ಟಿದ್ದಾರೆ. ಈ ಪ್ರೀತಿ ಶೀಲ್ ಸಿಂಗ್ ಯಾರು ಗೊತ್ತಾ? ಬಾಲಿವುಡ್ನ ಜನಪ್ರಿಯ ಮೇಕಪ್ ಮತ್ತು ಪ್ರಾಸ್ಥೆಟಿಕ್ ಆರ್ಟಿಸ್ಟ್. ಕಳೆದ ವರ್ಷ ಸುಶಾಂತ್ ಅಭಿನಯದ 'ಚಿಚ್ಚೋರೇ' ಎಂಬ ಚಿತ್ರ ಬಿಡುಗಡೆಯಾಯಿತಲ್ಲಾ, ಆ ಚಿತ್ರದಲ್ಲಿ ಸುಶಾಂತ್ ಅವರನ್ನು ಹಿರಿಯನಂತೆ ಮೇಕಪ್ ಮಾಡಿದ್ದು ಇದೇ ಪ್ರೀತಿ ಶೀಲ್ ಸಿಂಗ್.
ಈ ಚಿತ್ರಕ್ಕಾಗಿ ಸುಶಾಂತ್ ಅವರಿಗೆ ಸುಮಾರು ಮೂರು ಗಂಟೆಗಳ ಕಾಲ ತಯಾರು ಮಾಡಿದ್ದರಂತೆ. ಈ ಸಂದರ್ಭದಲ್ಲಿ ಸುಶಾಂತ್ ಜತೆಗಿನ ಒಡನಾಟವನ್ನು ಅವರು ಹಂಚಿಕೊಂಡಿದ್ದರಂತೆ. ಅದನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.
'ಸುಶಾಂತ್ ಅವರ ಜತೆಗಿರುವ ಫೋಟೋ ನೋಡಿದರೆ ಬಹಳ ಬೇಸರವಾಗುತ್ತದೆ. ನಾವು 'ಚಿಚ್ಚೋರೇ' ಚಿತ್ರದ ಯಶಸ್ಸನ್ನು ಸಂಭ್ರಮಿಸುವ ಸಂದರ್ಭದಲ್ಲಿ, ಅವರ ಸಾವಿನ ಬಗ್ಗೆ ದುಃಖದಿಂದ ಮಾತನಾಡುತ್ತಿದ್ದೇವೆ. ಸುಶಾಂತ್ಗೆ ಅವರ ಭವಿಷ್ಯದ ಬಗ್ಗೆ ಸಾಕಷ್ಟು ಪ್ಲಾನ್ಗಳಿದ್ದವು. ಏನೇನೋ ಕನಸುಗಳನ್ನು ಕಂಡಿದ್ದರು. ಅದರಲ್ಲೂ ಸುಶಾಂತ್ ಅವರಿಗೆ ಬಾಲ್ಡ್ ಲುಕ್ ಮಾಡಿದಾಗ, ಅದನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದರು' ಎಂದು ಪ್ರೀತಿ ಹೇಳಿಕೊಂಡಿದ್ದಾರೆ.
ಇನ್ನು ಸುಶಾಂತ್ ಇದೇ ಸಂದರ್ಭದಲ್ಲಿ ಒಂದು ಚಿತ್ರದಲ್ಲಿ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಆಸೆಪಟ್ಟಿದ್ದಾರಂತೆ. ಪಾತ್ರಕ್ಕೆ ಮೇಕಪ್ ನೈಜವಾಗಿ ಮೂಡಿಬರಬೇಕು ಎಂದು ಹೇಳಿದ್ದರು ಎಂದು ಪ್ರೀತಿ ಹೇಳಿದ್ದಾರೆ.