ಸಿನಿವಾಣಿ

ರಿಯಾ ವಿರುದ್ಧ ಸುಶಾಂತ್​ ಕುಟುಂಬ ಎತ್ತಿರುವ ಆ 8 ಅಂಶಗಳು ...

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿರುವುದು ಗೊತ್ತೇ ಇದೆ. ಸುಶಾಂತ್​ ಸಾವಿನ ಹಿಂದೆ ರಿಯಾ ಇರಬಹುದು ಎಂದು ಸುಶಾಂತ್​ ಕುಟುಂಬಕ್ಕೆ ಅನಿಸಿದ್ದು ಯಾಕೆ? ಈ ಕುರಿತು ಕೆ.ಕೆ. ಸಿಂಗ್​ ಎಂಟು ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

1) 2019ರ ಮುಂಚೆಗೆ ಸುಶಾಂತ್​​ಗೆ ಯಾವುದೇ ಮಾನಸಿಕ ಖಾಯಿಲೆಗಳಿರಲಿಲ್ಲ. ರಿಯಾ ಪರಿಚಯವಾದ ನಂತರವಷ್ಟೇ ಅವನಿಗೆ ಸಮಸ್ಯೆಗಳು ಶುರುವಾದವು. ಸುಶಾಂತ್​ಗೆ ಈ ಸಮಸ್ಯೆಗಳು ಶುರುವಾಗಿದ್ದು ಯಾಕೆ?

2) ಸುಶಾಂತ್​ ಸಮಸ್ಯೆ ಎದುರಿಸುವಾಗ, ಅವರ ಕುಟುಂಬದವರನ್ನು ಯಾರೂ ಯಾಕೆ ಸಂಪರ್ಕ ಮಾಡುವ ಪ್ರಯತ್ನ ಮಾಡಿಲಿಲ್ಲ.

3) ಸುಶಾಂತ್​ಗಿದ್ದ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ಚೆನ್ನಾಗಿ ಗೊತ್ತಿತ್ತು. ಅವರು ಸಹ ಯಾರೂ ನಮ್ಮನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಲಿಲ್ಲ. ಹಾಗಾದರೆ, ಈ ಷಡ್ಯಂತ್ರದಲ್ಲಿ ವೈದ್ಯರು ಸಹ ಭಾಗಿಯಾಗಿರಬಹುದು.

4) ರಿಯಾಗೆ ನನ್ನ ಮಗನಿಗೆ ಸಮಸ್ಯೆ ಇದ್ದಿದ್ದು ಚೆನ್ನಾಗಿ ಗೊತ್ತಿತ್ತು. ಹಾಗಿರುವಾಗ ಆಕೆ ಯಾಕೆ ಅವನನ್ನು ಒಬ್ಬಂಟಿಯಾಗಿ ಬಿಟ್ಟು ಹೊರಟುಹೋದಳು. ಅಷ್ಟೇ ಅಲ್ಲ, ಹೋಗುವಾಗ ವೈದ್ಯರ ವರದಿಯನ್ನು ಏಕೆ ತೆಗೆದುಕೊಂಡು ಹೋದಳು?

5) ನನ್ನ ಮಗನ ಬ್ಯಾಂಕ್​ ಅಕೌಂಟ್​ನಲ್ಲಿ 17 ಕೋಟಿ ರೂಪಾಯಿಯಿತ್ತು. ಅದರಲ್ಲಿ 15 ಕೋಟಿಯನ್ನು ಬೇರೆಬೇರೆ ಅಕೌಂಟ್​ಗಳಿಗೆ ವರ್ಗಾಯಿಸಲಾಗಿದೆ. ಹಾಗೆ ವರ್ಗಾವಣೆ ಮಾಡಿದ್ದು ಯಾರು ಮತ್ತು ಯಾಕೆ?

6) ರಿಯಾ ಜತೆಗೆ ಸ್ನೇಹವಾದ ಮೇಲೆ, ಸುಶಾಂತ್​ಗೆ ಚಿತ್ರರಂಗದಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾದವು. ಈ ಬಗ್ಗೆ ಕೂಡಾ ಸೂಕ್ತ ತನಿಖೆಯಾಗಬೇಕಿದೆ.

7) ಸುಶಾಂತ್​ಗೆ ಕೊಡಗಿನಲ್ಲಿ ಆರ್ಗಾನಿಕ್​ ಫಾರ್ಮಿಂಗ್​ನಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅದಕ್ಕೆ ಅವನ ಸ್ನೇಹಿತ ಮಹೇಶ್​ ಸಹ ಜತೆಯಾಗಿದ್ದ. ಆದರೆ, ರಿಯಾ ಪ್ರತಿಭಟಿಸಿದಳು. ಸುಶಾಂತ್​ ಏನಾದರೂ, ಕೃಷಿಯಲ್ಲಿ ತೊಡಗಿಸಿಕೊಂಡರೆ ಆತನ ಚಿಕಿತ್ಸೆ ಬಗ್ಗೆ ಮಾಧ್ಯಮದವರಿಗೆ ಹೇಳಿ, ಅವನ ಕೆರಿಯರ್​ನ್ನು ಹಾಳು ಮಾಡುವುದಾಗಿ ಬೆದರಿಸಿದಳು.

8) ಯಾವಾಗ ಸುಶಾಂತ್​ ಇದಕ್ಕೆ ಬಗ್ಗಲಿಲ್ಲವೋ, ಆಗ ರಿಯಾ ಆತನ ಚಿಕಿತ್ಸೆಯ ಪತ್ರಗಳು, ಲ್ಯಾಪ್​ಟಾಪ್​, ಕ್ರೆಡಿಟ್​ ಕಾರ್ಡ್​, ಹಣ ಮತ್ತು ಒಡವೆಗಳನ್ನು ತೆಗೆದುಕೊಂಡು ಹೊರಟು ಹೋದಳು.