ಸಿನಿವಾಣಿ

ಮಳೆ ನಡುವೆ ಮುಗಿಯಿತು ಸುಶಾಂತ್​ ಸಿಂಗ್​ ಅಂತ್ಯಕ್ರಿಯೆ

chetannadiger

ಭಾನುವಾರ ಆತ್ಮಹತ್ಯೆಯಿಂದ ನಿಧನರಾದ ಬಾಲಿವುಡ್​ನ ಖ್ಯಾತ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಂತ್ಯಕ್ರಿಯೆ ಮುಗಿದಿದೆ.

ಮುಂಬೈನ ವಿಲೆ ಪಾರ್ಲೆ ಚಿತಾಗಾರದಲ್ಲಿ ಸುಶಾಂತ್​ ಅವರ ಅಂತ್ಯಕ್ರಿಯೆ ನಡೆದಿದ್ದು, ಈ ಸಂಧರ್ಭದಲ್ಲಿ ಅವರ ಕುಟುಂಬದ ಸದಸ್ಯರ ಜತೆಗೆ ಬಾಲಿವುಡ್​ನ ಕೆಲವು ಜನಪ್ರಿಯ ಸೆಲೆಬ್ರಿಟಿಗಳು ಸಹ ಹಾಜರಿದ್ದರು. ನಟಿಯರಾದ ಶ್ರದ್ಧಾ ಕಪೂರ್​, ಕೃತಿ ಸಾನನ್​, ರಾಜಕುಮಾರ್​ ರಾವ್​, ನಿರ್ದೇಶಕರಾದ ಅಭಿಷೇಕ್​ ಕಪೂರ್​, ಮುಕೇಶ್​ ಚಾಬ್ರ, ವಿವೇಕ್​ ಒಬೆರಾಯ್​, ರಣವೀರ್​ ಶೌರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಸುಶಾಂತ್​ ಅವರ ಪಾರ್ಥೀವ ಶರೀರವನ್ನು ಪೋಸ್ಟ್​ ಮಾರ್ಟಂಗಾಗಿ ಕೂಪರ್​ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆ ನಂತರ ಅವರನ್ನು ವಿಲೆ ಪಾರ್ಲೆ ಚಿತಾಗಾರಕ್ಕೆ ಕರೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಮಳೆ ಇದ್ದರೂ, ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸುಶಾಂತ್​ ಅವರ ಅಂತಿಮ ದರ್ಶನವನ್ನು ಪಡೆದರು.