ಸಿನಿವಾಣಿ

1 ಪರ್ಸೆಂಟ್​ ಜನರಿಗೆ ಮಾತ್ರ ಅಂಥದ್ದೊಂದು ಪ್ರತಿಭೆ ಇದೆಯಂತೆ ...

manjunathktgns

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ, ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಲವು ಫೋಟೋಗಳನ್ನು ಮತ್ತು ವಿಡಿಯೋ ಹಂಚಿಕೊಂಡು, ತಮ್ಮ ಸಹೋದರ ಅದೆಷ್ಟು ಪ್ರತಿಭಾವಂತ ಎಂದು ಹೇಳುತ್ತಲೇ ಬಂದಿದ್ದಾರೆ.

ಈಗ ಶ್ವೇತಾ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸುಶಾಂತ್​ ತಮ್ಮ ಎರಡೂ ಕೈಗಳಲ್ಲಿ ಒಟ್ಟಿಗೆ ಬರೆಯುವ ಅಪರೂಪದ ದೃಶ್ಯವನ್ನು ನೋಡಬಹುದಾಗಿದೆ.

ಇಂಥದ್ದೊಂದು ದೃಶ್ಯವನ್ನು ಆಮೀರ್​ ಖಾನ್​ ಅಭಿನಯದ 'ಥ್ರೀ ಈಡಿಯಟ್ಸ್​' ಚಿತ್ರದ ದೃಶ್ಯವೊಂದರಲ್ಲಿ ಬೋಮನ್​ ಇರಾನಿ ಅವರು ತಮ್ಮ ಎರಡೂ ಕೈಗಳಿಂದ ಬರೆಯುವ ದೃಶ್ಯವನ್ನು ನೋಡಬಹುದು. ಅಂಥದ್ದೇ ಪ್ರತಿಭೆ ಮತ್ತು ಸಾಮರ್ಥ್ಯ ಸುಶಾಂತ್​ ಅವರಿಗೂ ಇತ್ತು ಎಂಬುದನ್ನು ಈ ವಿಡಿಯೋ ಮೂಲಕ ಗೊತ್ತಾಗುತ್ತದೆ.

ಈ ವಿಡಿಯೋ ಕುರಿತು ಮಾತನಾಡಿರುವ ಶ್ವೇತಾ ಸಿಂಗ್ ಕೀರ್ತಿ, ಸುಶಾಂತ್ ಒಬ್ಬ ರೇರ್​ ಜೀನಿಯಸ್​ ಆಗಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಒಂದು ಪರ್ಸೆಂಟ್​ ಜನರಿಗೆ ಮಾತ್ರ ಇಂಥದ್ದೊಂದು ಶಕ್ತಿ ಇರುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮೈ ಬ್ರದರ್​ ದಿ ಬೆಸ್ಟ್​ ಎಂದು ಹೇಳಿಕೊಂಡಿದ್ದಾರೆ.