

ನವದೆಹಲಿ: ಕಂಗನಾ ರಣಾವತ್ ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆಯಾ? ಇಂಥದ್ದೊಂದು ಅನುಮಾನ ಖುದ್ದು ಕಂಗನಾಗೆ ಬಂದಿದೆ. ಹಾಗಾಗಿ ಈ ವಿಷಯವನ್ನು ಅಭಿಮಾನಿಗಳಿಗೇ ಕೇಳಿದ್ದಾರವರು. ಇದುವರೆಗೂ ಟೀಮ್ ಕಂಗನಾ ರಣಾವತ್ ಎಂಬ ತಮ್ಮ ಡಿಜಿಟಲ್ ತಂಡದ ಟ್ವಿಟರ್ ಖಾತೆಯ ಮೂಲಕ ಅನಿಸಿಕೆ- ಅಭಿಪ್ರಾಯಗಳನ್ನು ಕಂಗನಾ ಹಂಚಿಕೊಳ್ಳುತ್ತಿದ್ದಾರೆ.
ಅವರಿಗೆ 1 ಮಿಲಿಯನ್ ಹಿಂಬಾಲಕರು ಇದ್ದು, ಇತ್ತೀಚಿನ ದಿನಗಳಲ್ಲಿ ಅದು ಕ್ರಮೇಣ ಕಡಿಮೆಯಾಗುತ್ತಿದೆ. ಪ್ರತಿ ದಿನ 40, 50 ಸಾವಿರದಷ್ಟು ಫಾಲೋವರ್ಸ್ ಅವರನ್ನು ಕೈ ಬಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸತತವಾಗಿ ಹಲವರ ವಿರುದ್ಧ ಕಂಗನಾ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರ ಬಿಚ್ಚುಮಾತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದವರು, ಕಂಗನಾ ಹುಟ್ಟುಹಾಕುತ್ತಿರುವ ವಿವಾದಗಳಿಂದ ಬೇಸತ್ತಿದ್ದಾರೆ. ಅದೇ ಕಾರಣಕ್ಕೆ ಕ್ರಮೇಣ ಅವರ ಮಾತುಗಳಿಂದ ಬೇಸತ್ತು ಅನ್ಫಾಲೋ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಿಜವಾಗಿದ್ದರೆ, ಇನ್ನಾದರೂ ಕಂಗನಾ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂಬುದು ಅಭಿಮಾನಿ ವಲಯದ ಪ್ರಶ್ನೆ. (ಏಜೆನ್ಸೀಸ್)