ಸಿನಿವಾಣಿ

47ನೇ ವಯಸ್ಸಿನಲ್ಲಿ ಮದ್ವೆಯಾದ ಬಾಹುಬಲಿ ಕುಮಾರ ವರ್ಮ! ವಧು ಯಾರು ಗೊತ್ತೇ? Subbaraju Marriage

Subbaraju Marriage : ವಿಲನ್​​ ಪಾತ್ರಗಳಿಗೆ ಹೆಸರಾದ ತೆಲುಗು ನಟ ಸುಬ್ಬರಾಜು 47ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಕುಮಾರ ವರ್ಮ ಪಾತ್ರದ ಮೂಲಕ ಸುಬ್ಬರಾಜು ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಇದೀಗ ಮದುವೆಯಾಗಿರುವ ಸುದ್ದಿಯನ್ನು ಸ್ವತಃ ಸುಬ್ಬರಾಜು ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ತಮ್ಮ ಪತ್ನಿಯೊಂದಿಗೆ ಮದುವೆಯ ಉಡುಪಿನಲ್ಲಿ ಸಮುದ್ರತೀರದಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ಸುಬ್ಬರಾಜು 'ಕೊನೆಗೂ ಮದುವೆಯಾದೆ' ಎಂಬ ಶೀರ್ಷಿಕೆ ನೀಡಿದ್ದಾರೆ.

ಸುಬ್ಬರಾಜು ರೇಷ್ಮೆ ಕುರ್ತಾ ಧರಿಸಿದ್ದರೆ, ವಧು ಕೆಂಪು ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. ಇಬ್ಬರು ಹಣೆಯಲ್ಲಿ ಬಾಸಿಂಗ ಧರಿಸಿದ್ದರೆ. ಒಬ್ಬರೊನ್ನೊಬ್ಬರು ನೋಡುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ವಧುವಿನ ಹೆಸರು ಶ್ರವಂತಿ. ಆದರೆ, ಆಕೆಯ ಬಗ್ಗೆಯಾಗಲಿ ಅಥವಾ ಮದುವೆಯ ಬಗ್ಗೆಯಾಗಲಿ ಹೆಚ್ಚಿನ ವಿವರಗಳು ಇನ್ನೂ ಲಭ್ಯವಿಲ್ಲ. ಫೋಟೋ ಹಂಚಿಕೊಂಡ ಬೆನ್ನಲ್ಲೇ ನವದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಿಮ್ಮ ಜೀವನವನ್ನು ಕಲರ್ ಫುಲ್ ಮಾಡಿಕೊಳ್ಳಿ ಮತ್ತು ಅಣ್ಣನಿಗೆ ಹುಡುಗಿ ಸಿಕ್ಕಳು ಎಂಬ ಕಮೆಂಟ್​ಗಳು ಬರುತ್ತಿವೆ.

ಭೀಮಾವರಂನಲ್ಲಿ ಹುಟ್ಟಿ ಬೆಳೆದ ಸುಬ್ಬರಾಜು ಅನಿರೀಕ್ಷಿತವಾಗಿ ಸಿನಿಮಾ ಇಂಡಸ್ಟ್ರಿಗೆ ಬಂದರು. ನಿರ್ದೇಶಕ ಕೃಷ್ಣವಂಶಿ ಅವರ ಕಂಪ್ಯೂಟರ್ ರಿಪೇರಿ ಮಾಡಲು ಬಂದ ಸುಬ್ಬರಾಜುಗೆ ಆಕಸ್ಮಿಕವಾಗಿ ಸಿನಿಮಾ ಅವಕಾಶ ಸಿಕ್ಕಿತು. ಖಡ್ಗಂ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಪುರಿ ಜಗನ್ನಾಥ್ ಅವರ ಚಿತ್ರಗಳಲ್ಲಿ ಸತತವಾಗಿ ನಟಿಸುವ ಮೂಲಕ ಜನಪ್ರಿಯರಾದರು. ಕಡಿಮೆ ಸಮಯದಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸಿ ಸ್ಟಾರ್ ಆದರು. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲನ್ ಆಗಿ ಹಾಗೂ ಕಾಮಿಡಿಯನ್ ಆಗಿ ಹೀಗೆ ಎಲ್ಲ ಪಾತ್ರಗಳಲ್ಲೂ ರಂಜಿಸಿದರು. ಸುಬ್ಬರಾಜು ಅವರು ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಿನಿಮಾ ಮಾಡಿದ್ದಾರೆ. ಎಲ್ಲ ಭಾಷೆಗಳಿಂದ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಸುಬ್ಬರಾಜು ಅವರು ಆರ್ಯ, ಅಮ್ಮ ನಾನ್ನ ಓ ತಮಿಳು ಅಮ್ಮಾಯಿ, ಪೋಕಿರಿ, ಖಲೇಜಾ, ಉದ್ಯಮಿ, ಬಾಹುಬಲಿ 2, ಗೀತಾ ಗೋವಿಂದಂ, ಎಫ್ 2, ಸರ್ಕಾರ ವಾರಿ ಪಟ ಮುಂತಾದ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)