IPL ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ. ಪಡೆದರೂ ರಿಷಭ್​ ಕೈಗೆ ಸಿಗೋದು ಮಾತ್ರ ಇಷ್ಟೇನಾ!? Rishabh Pant

Rishabh Pant
Published on

Rishabh Pant : ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಖರೀದಿ ಮಾಡಿದೆ.

ನ.24ರ ಭಾನುವಾರ ಮತ್ತು ನ.25 ಸೋಮವಾರ ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್​ 2025ರ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ. ಬರೋಬ್ಬರಿ 27 ಕೋಟಿ ರೂ. ಕೊಟ್ಟು ಎಲ್​ಎಸ್​ಜಿ ಫ್ರಾಂಚೈಸಿ, ರಿಷಭ್​ ಪಂತ್​ ಅವರನ್ನು ಖರೀದಿ ಮಾಡಿತು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ಶ್ರೇಯಸ್ ಅಯ್ಯರ್‌ಗಾಗಿ 26.75 ಕೋಟಿ ರೂ. ಖರ್ಚು ಮಾಡಿತು.

ಆದರೆ, ರಿಷಭ್​ ಪಂತ್​ ಕೈಗೆ 27 ಕೋಟಿ ರೂ. ಸಿಗುವುದಿಲ್ಲ. ಬದಲಾಗಿ ತೆರಿಗೆ ಕಡಿತದ ನಂತರ 18.9 ಕೋಟಿ ರೂ. ಸಿಗಲಿದೆ. ರಿಷಭ್ ಅವರು ಸಂಭಾವನೆಯಿಂದ 8.1 ಕೋಟಿ ರೂಪಾಯಿ ತೆರಿಗೆ ಕಟ್ಟಬೇಕಿದೆ. ಕಳೆದ ಸೀಸನ್​ನಲ್ಲಿ​ ಡೆಲ್ಲಿ ಕಾಪಿಟಲ್ಸ್​ ತಂಡ ನಾಯಕತ್ವ ವಹಿಸಿಕೊಂಡಿದ್ದ ರಿಷಭ್​, ಈ ಸೀಸನ್​ನಲ್ಲಿ ಲಖನೌ ತಂಡವನ್ನು ಮುನ್ನೆಡೆಸಲಿದ್ದಾರೆ. ಲಖನೌ ತಂಡವನ್ನು ತೊರೆದಿರುವ ಕೆ.ಎಲ್​. ರಾಹುಲ್​ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನೆಡೆಲಿದ್ದಾರೆ.

ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಕ್ರಿಕೆಟಿಗರು

* ರಿಷಭ್​ ಪಂತ್ : ಲಖನೌ ಸೂಪರ್ ಜೈಂಟ್ಸ್ ( 27 ಕೋಟಿ ರೂ. )

* ಶ್ರೇಯಸ್ ಅಯ್ಯರ್ : ಪಂಜಾಬ್ ಕಿಂಗ್ಸ್ ( 26.75 ಕೋಟಿ ರೂ. )

* ವೆಂಕಟೇಶ್ ಅಯ್ಯರ್ : ಕೋಲ್ಕತ್ತ ನೈಟ್ ರೈಡರ್ಸ್ ( 23.75 ಕೋಟಿ ರೂ. )

ಉಳಿದಂತೆ ಅರ್ಷ್​ದೀಪ್ ಸಿಂಗ್​ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್​ ಸೇರಿದರೆ, ಯಜುವೇಂದ್ರ ಚಹಲ್ ಕೂಡ 18 ಕೋಟಿ ರೂ.ಗೆ ಖರೀದಿಯಾದರು. ಇನ್ನು 15.75 ಕೋಟಿಗೆ​ ಪವರ್​ ಹಿಟ್ಟರ್​​ ಜೋಸ್​ ಬಟ್ಲರ್​ ಗುಜರಾತ್​ ಟೈಟನ್ಸ್​ ಸೇರಿಕೊಂಡರು.

ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್​ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್​ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net