ಸಿನಿವಾಣಿ

ನೀವು ಎಷ್ಟೇ ಹಣ ಕೊಟ್ಟರೂ ನಾನದನ್ನು ಮಾಡಲ್ಲ! ಎರಡು ಬಿಗ್​ ಆಫರ್​ಗೆ ನೋ ಎಂದ ಶ್ರೀಲೀಲಾ

ಹೈದರಾಬಾದ್​: ಸಾಮಾನ್ಯ ನಟಿಯಾಗಿ ಎಂಟ್ರಿ ಕೊಟ್ಟು ನಟಿಸಿದ ಕೆಲವೇ ಸಿನಿಮಾಗಳಿಂದ ಸ್ಟಾರ್​ ಹೀರೋಯಿನ್​ ಇಮೇಜ್ ಪಡೆದವರಲ್ಲಿ ಕನ್ನಡತಿ ಶ್ರೀಲೀಲಾ ಕೂಡ ಒಬ್ಬರು. ಸರಿಯಾಗಿ ಒಂದು ವರ್ಷದ ಹಿಂದೆ ಇದೇ ಸಮಯದಲ್ಲಿ ಶ್ರೀಲೀಲಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದವು. ಬಿಜಿ ಹೀರೋಯಿನ್ ಕೂಡ ಅವರೇ ಆಗಿದ್ದರು. ಆದರೆ ಒಂದೇ ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ಇದೀಗ ಶ್ರೀಲೀಲಾ ಕೈಯಲ್ಲಿ ಒಂದೋ ಎರಡೋ ಪ್ರಾಜೆಕ್ಟ್‌ಗಳಿವೆ.

ಪವನ್​ ಕಲ್ಯಾಣ್​ ಜತೆಗಿನ ಚಿತ್ರ ಬಿಟ್ಟರೆ ಇನ್ನಾವುದೇ ಗಮನಾರ್ಹ ಪ್ರಾಜೆಕ್ಟ್ ಇಲ್ಲ. ಸ್ಟಾರ್​ ಹೀರೋಗಳ ಜತೆ ನಟಿಸಿದ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿದ ಕಾರಣ ಶ್ರೀಲೀಲಾರಿಗೆ ಮತ್ತೆ ಅವಕಾಶ ನೀಡಲು ನಿರ್ಮಾಪಕರು ಹಿಂದೆ ಸರಿಯುತ್ತಿರುವಂತೆ ತೋರುತ್ತದೆ.

ಇನ್ನು ಶ್ರೀಲೀಲಾ ತನ್ನ ನಟನೆಗಿಂತ ಅದ್ಭುತ ಡಾನ್ಸ್​ನಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಅವರ ಮಾದಕ ನೃತ್ಯಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಶ್ರೀಲೀಲಾ ಅವರ ಡಾನ್ಸ್​ ಆಧಾರದ ಮೇಲೆ ಅವರಿಗೆ ಎರಡು ಐಟಂ ಸಾಂಗ್ ಆಫರ್‌ಗಳು ಬಂದಿವೆಯಂತೆ.

ಬಾಲಿವುಡ್‌ನ ದೊಡ್ಡ ಸಿನಿಮಾ ಹಾಗೂ ತಮಿಳಿನ ಪ್ರತಿಷ್ಠಿತ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ನಿರ್ಮಾಪಕರು ಆಕೆಯನ್ನು ಸಂಪರ್ಕಿಸಿದ್ದರು. ಆದರೆ, ಕೆರಿಯರ್ ದೃಷ್ಟಿಯಿಂದ ಐಟಂ ಡಾನ್ಸ್​ಗೆ ಶ್ರೀಲೀಲಾ ನೋ ಎಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನೀವು ಎಷ್ಟೇ ಹಣ ಕೊಟ್ಟರು ನಾನು ಐಟಂ ಡಾನ್ಸ್​ ಮಾಡುವುದಿಲ್ಲ ಎಂದು ನಟಿ ಶ್ರೀಲೀಲಾ ಹೇಳಿದ್ದಾರಂತೆ.

ವಾಸ್ತವವಾಗಿ, ನಟಿಯರಾದ ತಮನ್ನಾ ಹಾಗೂ ಕಾಜಲ್ ಅಗರ್ವಾಲ್ ಅವರಂತಹ ಸ್ಟಾರ್​ ನಾಯಕಿಯರು ಕೂಡ ಸೈಡ್ ಹೀರೋಯಿನ್‌ಗಳಾಗಿ ನಟಿಸುತ್ತಿದ್ದಾರೆ. ಐಟಂ ಹಾಡುಗಳು ಬಂದಾಗ ಯಾವುದೇ ಹಿಂಜರಿಕೆಯಿಲ್ಲದೆ ಅವುಗಳನ್ನು ಮಾಡಿದ್ದಾರೆ. ಆದರೆ, ಶ್ರೀಲೀಲಾ ಈ ವಿಚಾರದಲ್ಲಿ ವಿರುದ್ಧವಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಎರಡು ಚಿತ್ರಗಳಿವೆ. ನಿತಿನ್ ಜೊತೆಗೆ ರಾಬಿನ್ ಹುಡ್ ಮತ್ತು ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)