ಸಿನಿವಾಣಿ

ಪ್ರಭಾಸ್ ಚಿತ್ರಕ್ಕೆ ದಕ್ಷಿಣ ಕೊರಿಯಾ ನಟಿ?

ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್ ಬಿಡುಗಡೆಯ ಹಂತಕ್ಕೆ ಬಂದಿದೆ. ‘ಆದಿಪುರುಷ್’ ಚಿತ್ರೀಕರಣ ಮುಕ್ತಾಯವಾಗಿದೆ. ‘ಸಲಾರ್’ ಚಿತ್ರೀಕರಣ ಪ್ರಗತಿಯಲ್ಲಿದೆ. ಆ ನಂತರ ಮುಂದೇನು ಎಂಬ ಪ್ರಶ್ನೆಯೇ ಇಲ್ಲ. ಈಗಾಗಲೇ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್, ‘ಸ್ಪಿರಿಟ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ‘ಸಲಾರ್’ ಮುಗಿಯುತ್ತಿದ್ದಂತೆಯೇ ಆ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಈ ಚಿತ್ರದಲ್ಲಿ ಪ್ರಭಾಸ್ ನಾಯಕಿಯಾಗಿ ದಕ್ಷಿಣ ಕೊರಿಯಾದ ನಟಿ ಸಾಂಗ್ ಹೇ-ಕ್ಯೋ ನಟಿಸುತ್ತಿದ್ದಾರಂತೆ. ಹಾಗಂತ ಚಿತ್ರತಂಡದವರೇನೂ ಹೇಳಿಕೊಂಡಿಲ್ಲ ಬಿಡಿ. ಆದರೆ, ಸುದ್ದಿಯಂತೂ ಆಗಿದೆ. ಈ ಸಾಂಗ್ ಹೇ-ಕ್ಯೋ, ‘ಫುಲ್ ಹೌಸ್’, ‘ಮೈ ಹಾರ್ಟ್’ ಮತ್ತು ‘ಆಲ್ ಇನ್ ಆಲ್’ ಸರಣಿಗಳಿಂದ ಬಹಳ ಜನಪ್ರಿಯರಾಗಿದ್ದಾರೆ. ಆಕೆಯನ್ನು ಭಾರತ ದಲ್ಲೂ ಆಧಾರಿಸುವ ಅಭಿಮಾನಿಗಳಿದ್ದಾರೆ.

ಇನ್ನು, ಕಥೆ ಮತ್ತು ಪಾತ್ರಕ್ಕೆ ಒಬ್ಬ ವಿದೇಶಿ ನಟಿಯ ಅವಶ್ಯಕತೆ ಇದ್ದ ಕಾರಣ, ಚಿತ್ರತಂಡದವರು ಸಾಂಗ್​ಗೆ ಗಾಳ ಹಾಕಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.