ಸಿನಿವಾಣಿ

‘ನನ್ನ ಮಗ ಗಾಯಕನಾಗುವುದು ಬೇಡ, ಆದರೂ ಭಾರತದಲ್ಲಿ ಬೇಡವೇ ಬೇಡ’; ಸೋನು ನಿಗಮ್

ಮುಂಬೈ: ಭಾರತ ಕಂಡ ಅತ್ಯದ್ಬುತ ಗಾಯಕ ಸೋನು ನಿಗಮ್​ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾರೆ. ತಮ್ಮ ಮಗನ ಮುಂದಿನ ಕರಿಯರ್​ ಬಗ್ಗೆ ಸೋನು ಮಾತನಾಡಿದ್ದು, ನನ್ನ ಮಗ ಗಾಯಕನಾಗುವುದು ಬೇಡ, ಅದರಲ್ಲೂ ಭಾರತದಂಥ ದೇಶದಲ್ಲಿ ಮೊದಲೇ ಬೇಡ ಎಂಬ ಹೇಳಿಕೆ ನೀಡಿದ್ದಾರೆ.

ಭಾರತದ ಬಹುತೇಕ ಎಲ್ಲ ಭಾಷೆಗಳಿಗೆ ಕಂಠದಾನ ಮಾಡಿರುವ ಸೋನು, ಕನ್ನಡದ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕೆಲ ದಶಕಗಳಿಂದ ಗಾಯನ ಕ್ಷೇತ್ರದಲ್ಲಿಯೇ ಸೋನು ಗುರುತಿಸಿಕೊಂಡಿದ್ದಾರೆ. ಆದರೆ, ಮಗನ ಕರಿಯರ್ ಬೆಳವಣಿಗೆ ಮಾತ್ರ ಭಾರತದಲ್ಲಿ ಬೇಡ ಎಂದಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಸೋನು, 'ನನ್ನ ಮಗ ನಿವನ್ ಗಾಯಕನಾಗುವುದು ಬೇಡ. ಒಂದು ವೇಳೆ ಗಾಯಕನಾಗಲೇ ಬೇಕೆಂದರೆ, ಭಾರತದಲ್ಲಿ ಬೇಡ. ಇಲ್ಲಿನ ಸಂಗೀತ ಕ್ಷೇತ್ರದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಆತನಿಗೆ ಗೇಮಿಂಗ್​ನಲ್ಲಿ ಆಸಕ್ತಿ ಇದೆ. ದುಬೈನಲ್ಲಿಯೇ ಆತನ ಮುಂದಿನ ಬೆಳವಣಿಗೆ ಇರಲಿದೆ. ಹೇಗಿದ್ದರೂ ಆತ ಭಾರತದಲ್ಲಿ ವಾಸಿಸುವುದೇ ಇಲ್ಲ. ನಾನು ಅವನನ್ನು ಈಗಾಗಲೇ ಭಾರತದಿಂದ ಹೊರಗೆ ಕರೆದುಕೊಂಡು ಹೋಗಿದ್ದೇನೆ. ಸದ್ಯಕ್ಕೆ ದುಬೈನಲ್ಲಿನ ಟಾಪ್‌ ಗೇಮರ್‌ಗಳಲ್ಲಿ ಅವನೂ ಒಬ್ಬನಾಗಿರುವುದರಿಂದ, ಅನೇಕ ಪ್ರತಿಭೆಗಳಿರುವ ಬುದ್ಧಿವಂತ ಹುಡುಗ ಅವನು. ಅವನು ಏನಾಗಬೇಕು ಎಂದು ನಾನು ಅವನಿಗೆ ಹೇಳಲು ಇಷ್ಟಪಡುವುದಿಲ್ಲ. ಅದನ್ನು ಅವನೇ ನಿರ್ಧರಿಸಲಿ ಎಂದಿದ್ದಾರೆ. ಎಂದು ಸೋನು ತಿಳಿಸಿದ್ದಾರೆ.