ಮುಂಬೈ: ಸೌತ್ ಸೆನ್ಸೆಷನ್ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಬಾಲಿವುಡ್ನ ಟಾಪ್ ರ್ಯಾಪರ್ ಬಾದ್ಷಾ ಅವರ ಹಾಡಿನಲ್ಲಿ ಹೆಜ್ಜೆ ಹಾಕಿ ಬಂದಿದ್ದರು. ಇದೀಗ ಬಾಲಿವುಡ್ ಚಿತ್ರವನ್ನೇ ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಲಿರುವ ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್ನಲ್ಲಿ ರಶ್ಮಿಕಾ ಖಾತೆ ತೆರೆಯಲು ಸಿದ್ಧರಾಗಿದ್ದಾರೆ.
ನಿರ್ದೇಶಕ ಶಾಂತನು ಭಾಗ್ಚಿ ನಿರ್ದೇಶನದಲ್ಲಿ ಮಿಷನ್ ಮಜ್ನು ಸಿನಿಮಾ ತಯಾರಾಗಲಿದ್ದು, ರೋನಿ ಸ್ಕ್ರಿವ್ ವಾಲಾ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅಮರ್ ಬುಟ್ಲಾ, ಗರೀಮ್ ಮೆಹ್ತಾ ಸಹ ಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಸಿದ್ಧಾರ್ಥ್ ಗೆ ರಶ್ಮಿಕಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
70ರ ಕಾಲಘಟ್ಟದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನೇ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಿದ್ದು, 2021ರ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ. ರಾ ಏಜೆಂಟ್ ಪಾತ್ರದಲ್ಲಿ ಸಿದ್ಧಾರ್ಥ್ ನಟಿಸಲಿರುವ ಈ ಚಿತ್ರ ದೇಶಭಕ್ತಿಗೆ ಸಂಬಂಧಿಸಿದ್ದಾಗಿದೆ. ಕಳೆ ಮೂರು ವರ್ಷಗಳಿಂದ ಈ ಚಿತ್ರದ ಕಥೆಯನ್ನು ಅಭಿವೃದ್ಧಿಪಡಿಸುತ್ತ ಬರಲಾಗುತ್ತಿದೆ. ಇದೀಗ ಎಲ್ಲವೂ ಮುಕ್ತಾಯವಾಗಿದ್ದು, ಇನ್ನೇನು ಶೂಟಿಂಗ್ ಶುರುವಾಗಲಿದೆ.
ಇದನ್ನೂ ಓದಿ: ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆ ಸದ್ಯಕ್ಕಿಲ್ಲ
ಇನ್ನು ಕೆಲ ದಿನಗಳ ಹಿಂದಷ್ಟೇ ನಟಿ ರಶ್ಕಿಕಾ, ರ್ಯಾಪರ್ ಬಾದ್ಷಾ ಅವರ ಹಾಡಿನಲ್ಲಿ ಹೆಜ್ಜೆ ಹಾಕಿ ಬಂದಿದ್ದಾರೆ. ಇಲ್ಲಿಯವರೆಗೂ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಮೊದಲ ಬಾರಿಗೆ ಮ್ಯೂಸಿಕ್ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿಯೂ ಸಾಕಷ್ಟು ನಟಿಯರು ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಒಂದಷ್ಟು ಹಾಡುಗಳ ಶೂಟಿಂಗ್ ಪ್ರಕ್ರಿಯೆಯೂ ಈಗಾಗಲೇ ಶುರುವಾಗಿದೆ. ಆದರೆ, ಇಲ್ಲಿಯವರೆಗೂ ಕನ್ನಡದ ನಟಿಯೊಬ್ಬರು ರ್ಯಾಪರ್ ಬಾದ್ಷಾ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಆ ಚಾನ್ಸ್ ರಶ್ಮಿಕಾಗೆ ಒಲಿದಿತ್ತು.
ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಹಾಡಿಗೆ ಬಾಲಿವುಡ್ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಬಂಡವಾಳ ಹೂಡಿದೆ. ರ್ಯಾಪರ್ ಬಾದ್ಷಾ ಈಗಾಗಲೇ ಬಾಲಿವುಡ್ನ ಆಲಿಯಾ ಭಟ್, ಸೋನಮ್ ಕಪೂರ್, ಜಾಕ್ಲೀನ್ ಫರ್ನಾಂಡೀಸ್, ನೋರಾ ಫತೇಹಿ, ವರುಣ್ ಧವನ್ ಸೇರಿ ಹಲವು ಸ್ಟಾರ್ಗಳ ಜತೆಗೆ ಕೆಲಸ ಮಾಡಿದ್ದಾರೆ. ಇದೀಗ ಇದೇ ಬಾದ್ಷಾ ಜತೆಗೆ ಮೊದಲ ಬಾರಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ್ದಾರೆ.