ಸಿನಿವಾಣಿ

ಇಂಥಾ ಚಿತ್ರಗಳು ನೂರಾಗಲಿ ... 'ಬನಾರಸ್' ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಝೈದ್​ ಖಾನ್​ ಅಭಿನಯದ 'ಬನಾರಸ್​' ಚಿತ್ರವು ಕಳೆದ ಶುಕ್ರವಾರ (ನ.4) ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ, ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೋಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಭಾನುವಾರ ರಾತ್ರಿ ನಗರದ ಒರಾಯನ್​ ಮಾಲ್​ನಲ್ಲಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ ಸಿದ್ದರಾಮಯ್ಯ ಮತ್ತು ಝೈದ್​ ಖಾನ್​ ತಂದೆ ಜಮೀರ್​ ಅಹ್ಮದ್​ ಖಾನ್​ ಚಿತ್ರ ವೀಕ್ಷಿಸಿದರು.

ಈ ಕುರಿತು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, 'ಝೈದ್ ಖಾನ್ ಹಾಗೂ ಸೋನಂ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ. ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ, ಎಲ್ಲರಿಗೂ ಒಳಿತಾಗಲಿ ... ಎಂದು ಅವರು ಶುಭ ಹಾರೈಸಿದ್ದಾರೆ.

ಝೈದ್​ ಮೊದಲ ಬಾರಿಗೆ ನಟಿಸಿದ್ದಾನೆ ಎಂದನಿಸುವುದಿಲ್ಲ ಎಂದ ಝೈದ್​ ತಂದೆ ಜಮೀರ್​ ಅಹ್ಮದ್​ ಖಾನ್​, 'ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಝೈದ್​ ಇಷ್ಟು ಚೆನ್ನಾಗಿ ನಟಿಸಬಹುದು ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.

'ಬನಾರಸ್​' ಒಂದುಟೈಮ್​ಟ್ರಾವಲ್​ ಕುರಿತಾದ ಚಿತ್ರ. ಜಯತೀರ್ಥ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ತಿಲಕ್​ರಾಜ್​ ಭಲ್ಲಾಳ್​ ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಸುಜಯ್​ ಶಾಸ್ತ್ರಿ, ಅಚ್ಯುತ್​ ಕುಮಾರ್​ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ.

Siddar