ಸಿನಿವಾಣಿ

ಡಾ. ವಿಷ್ಣು ಸ್ಮಾರಕ; ಚಿತ್ರರಂಗಕ್ಕೆ ಹೆಮ್ಮೆಯ ವಿಷಯ ಎಂದ ಶಿವರಾಜಕುಮಾರ್​

chetannadiger

ಬೆಂಗಳೂರು: 'ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋರಿಕೆ ಕೊನೆಗೂ ಸ್ಮಾರಕ ರೂಪದಲ್ಲಿ ಈಡೇರುತ್ತಿರುವ ವಿಷಯ ನನಗೆ ಹಾಗೂ ನಮ್ಮ ಚಿತ್ರರಂಗಕ್ಕೆ ಬಹಳ ಹೆಮ್ಮೆಯ ವಿಷಯ' ಎಂದು ಶಿವರಾಜಕುಮಾರ್​ ಹೇಳಿದ್ದಾರೆ.

ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಈ ಸ್ಮಾರಕವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್​ ಹಾಜರಿರದಿದ್ದರೂ, ಸೋಷಿಯಲ್​ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, '13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ.! ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ, ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು' ಎಂದು ಹೇಳಿದ್ದಾರೆ.

ತಮ್ಮ ಕುಟುಂಬ ವಿಷ್ಣು ಅವರನ್ನು ಪ್ರೀತಿಯಿಂದ ಕಂಡಿದೆ ಎಂದ ಅವರು, 'ವಿಷ್ಣುವರ್ಧನ್ ಹಾಗೂ ನಮ್ಮ ಕುಟುಂಬದ ಬಾಂಧವ್ಯ ಮತ್ತು ಒಡನಾಟ ಬಹಳಷ್ಟಿವೆ. ವಿಷ್ಣುವರ್ಧನ್ ನಮ್ಮ ತಂದೆ ಡಾ.ರಾಜ್ ಅವರನ್ನು ಬಹಳಷ್ಟು ಪ್ರೀತಿ ಗೌರವ ಅಭಿಮಾನದಿಂದ ಕಾಣುತ್ತಿದ್ದರು. ಅಪ್ಪಾಜಿ ಹಾಗೂ ನಮ್ಮ ಕುಟುಂಬ ಕೂಡ ವಿಷ್ಣು ಅವರನ್ನು ತುಂಬು ಪ್ರೀತಿಯಿಂದ ಕಂಡಿದ್ದೇವೆ' ಎಂದು ಬರೆದುಕೊಂಡಿದ್ದಾರೆ.