ಬೆಂಗಳೂರು: ರಿಷಬ್ ಶೆಟ್ಟಿ ಫಿಲಂಸ್ನಡಿ ರಿಷಬ್ ಶೆಟ್ಟಿ ನಿರ್ಮಿಸಿರುವ 'ಶಿವಮ್ಮ' ಚಿತ್ರವು ಈಗಾಗಲೇ NFDC ಆಯೋಜಿತ ಫಿಲಂ ಬಜಾರ್ನ ವರ್ಕ್ ಇನ್ ಪ್ರೋಗ್ರೆಸ್ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈಗ ಆ ಚಿತ್ರಕ್ಕೆ ಫ್ರಾನ್ಸ್ನ ನಾಂಟೆಸ್ನಲ್ಲಿ ನೆಡೆದ 3 ಕಾಂಟಿನೆಂಟ್ಸ್ ಫೆಸ್ಟಿವಲ್ನಲ್ಲಿ 'ಯುವ ತೀರ್ಪುಗಾರರ ಪ್ರಶಸ್ತಿ' ಪಡೆದುಕೊಂಡಿದೆ.
ಈ ಚಿತ್ರವು ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣ ವಾಗಿದ್ದು, ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ಚಿತ್ರದಲ್ಲಿ ನಟಿಸಿರುವುದು ವಿಶೇಷ.
'ಶಿವಮ್ಮ' ಚಿತ್ರವನ್ನು ಜೈಶಂಕರ್ ಅರ್ಯ ನಿರ್ದೇಶನ ಮಾಡಿದ್ದು, ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.