ಸಿನಿವಾಣಿ

'ಶೇಮ್​...' ಇದು ಕಂಗನಾ ಪ್ರತಿಕ್ರಿಯೆ

ಮುಂಬೈ: ಚಿತ್ರನಟಿ ಕಂಗನಾ ರಾಣಾವತ್ ವರ್ಸಸ್ ಶಿವಸೇನೆ ಸಂಘರ್ಷ ತೀವ್ರಗೊಂಡಿರುವಾಗಲೇ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಶಿವಸೇನಾ ಅಟಾಟೋಪ ಎಲ್ಲೆಮೀರುತ್ತಿದೆ ಎಂಬ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಧ್ವನಿಸತೊಡಗಿದೆ. ಮುಂಬೈನಲ್ಲಿ ಏನಾಗುತ್ತಿದೆ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ!

ಪತ್ರಕರ್ತ ಆಶಿಶ್ ಸಿಂಗ್ ಅವರ ಟ್ವೀಟ್ 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು ಶಿವಸೇನಾ ಗೂಂಡಾಗಿರಿ ವ್ಯಾಪಕವಾಗಿ ಟೀಕೆಗೊಳಗಾಗಿದೆ. ಅವರ ಟ್ವೀಟ್​ನಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಅಟ್ಯಾಚ್ ಮಾಡಿದ್ದು ಶಿವಸೇನಾ ಗೂಂಡಾಗಿರಿಗೆ ಸಾಕ್ಷ್ಯವೆಂಬಂತಿದೆ. ಅದರಲ್ಲಿ ಅವರು ಬರೆದುಕೊಂಡಿರುವುದಿಷ್ಟು -

"ಮುಂಬೈನಲ್ಲಿ ಏನಾಗುತ್ತಿದೆ? ಶಿವಸೈನಿಕರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಅವರು ಮಾಡಿದ ತಪ್ಪೇನು ಅಂದ್ರೆ ಸಿಎಂ ಉದ್ಧವ್ ಅವರನ್ನು ಟೀಕಿಸಿದ್ದ ವಾಟ್ಸ್​ಆ್ಯಪ್ ಸಂದೇಶವನ್ನು ಫಾರ್ವರ್ಡ್ ಮಾಡಿದ್ದು!!!. ಕೇಂದ್ರ ಸರ್ಕಾರ ಕಂಗಾನ ಅವರಿಗೆ ಭದ್ರತೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಊಹಿಸಿಕೊಳ್ಳಿ"

ಈ ಟ್ವೀಟನ್ನು ಚಿತ್ರನಟಿ ಕಂಗನಾ ರೀಟ್ವೀಟ್ ಮಾಡಿದ್ದು, ಶೇಮ್ ಎಂಬ ಕಮೆಂಟನ್ನೂ ಸೇರಿಸಿದ್ದಾರೆ.