ಸಿನಿವಾಣಿ

'ಗುಚಿ'ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

rashmirhebbur

ಮುಂಬೈ : ಬಾಲಿವುಡ್​ನ ವರ್ಸಟೈಲ್ ಹೀರೋ ರಣವೀರ್ ಸಿಂಗ್ ಅವರು ಇಂದು ಬೆಳ್ಳಂಬೆಳಿಗ್ಗೆಯೇ ತಮ್ಮ ಅಭಿಮಾನಿಗಳಿಗೆ ಭಾರೀ ಟ್ರೀಟ್ ಕೊಟ್ಟಿದ್ದಾರೆ. ಗುಚಿ ಕಂಪೆನಿಯ ಉಡುಗೆತೊಡುಗೆಗಳೊಂದಿಗೆ ಪೋಸ್ ಮಾಡಿರುವ ತಮ್ಮ ಆಕರ್ಷಕ ಚಿತ್ರಗಳನ್ನು ಇನ್ಸ್​ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಗುಚಿ ಟ್ರ್ಯಾಕ್​ಸೂಟ್​ನ ಅವರ ಹೊಸ ಲುಕ್​ನಲ್ಲಿ ಹಸಿರು ಜ್ಯಾಕೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ಸ್​, ಗುಚಿ ಹೆಡ್​ ಬ್ಯಾಂಡ್​ಗಳನ್ನು ಶೋಆಫ್ ಮಾಡಿದ್ದಾರೆ. ಜೊತೆಗೆ ಎರಡೆಳೆಯ ಮುತ್ತಿನ ಹಾರವನ್ನೂ ತೊಟ್ಟಿರುವ ರಣವೀರ್​, ಬಿಳಿಯ ಸನ್​ಗ್ಲಾಸಸ್​ ಹಾಕಿಕೊಂಡು ತಮ್ಮ ಕೂದಲನ್ನು ಹಣೆ ಮತ್ತು ಕಣ್ಣುಗಳ ಮೇಲಕ್ಕೆ ಜಾರಿಸಿದ್ದಾರೆ.

ಈ ಸರಣಿ ಫೋಟೋಗಳ ಪೋಸ್ಟ್​ಗೆ, "ನಿಮ್ಮ 'ಚಿ'ಅನ್ನು ಹುಡುಕಿಕೊಳ್ಳಿ ಎಂದರು. ಅದಕ್ಕೆ ನಾನು ಗುಚಿ ಪಡೆದೆ" ಎಂದು ಹಾಸ್ಯಮಯ ಶೀರ್ಷಿಕೆ ನೀಡಿದ್ದಾರೆ! ಅವರ ಈ ಪೋಸ್ಟ್​ಗೆ ಎರಡು ಗಂಟೆಗಳಲ್ಲೇ 5.85 ಲಕ್ಷಕ್ಕೂ ಹೆಚ್ಚು ಲೈಕುಗಳ ಸುರಿಮಳೆಯಾಗಿದೆ.

ಇತ್ತೀಚೆಗಷ್ಟೇ, ರಣವೀರ್ ಮತ್ತೊಂದು ಗುಚಿ ಕಂಪೆನಿಯ ಫೋಟೋಶೂಟ್​ನ ಚಿತ್ರಗಳನ್ನೂ ಶೇರ್ ಮಾಡಿಕೊಂಡಿದ್ದರು. ಈಚೆಗೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲದ ರಣವೀರ್​​, 'ದ ಬಿಗ್ ಪಿಚ್ಚರ್' ಎಂಬ ಗೇಮ್​ ಶೋನೊಂದಿಗೆ ಸಣ್ಣ ತೆರೆಯನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ. (ಏಜೆನ್ಸೀಸ್)