ನಾನು ಮತ್ತೊಮ್ಮೆ ಧುರಂಧರ್​ ನೋಡುತ್ತೇನೆ: ಆರ್​ಜಿವಿ ಟ್ವಿಟ್​​ 
ಸ್ಯಾಂಡಲ್‌ವುಡ್

ಮತ್ತೊಮ್ಮೆ 'ಧುರಂಧರ್​' ನೋಡುತ್ತೇನೆ: 'ಟಾಕ್ಸಿಕ್'ಗೆ ಟಾಂಗ್​ ಕೊಟ್ಟ RGV; ವರ್ಮಾ ಟ್ವಿಟ್​ ವೈರಲ್​!​ RGV on Toxic

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​​ 26 ರಂದು ತೆರೆಕಂಡಿರುವ ಯಶ್​ ಅಭಿನಯದ ಟಾಕ್ಸಿಕ್​
  • ನಾನು ಮತ್ತೊಮ್ಮೆ ಧುರಂಧರ್​ ನೋಡುತ್ತೇನೆ: ಆರ್​ಜಿವಿ ಟ್ವಿಟ್​​
  • ಟಾಕ್ಸಿಕ್​ಗೆ ಪರೋಕ್ಷ ಟಾಂಗ್​ ಕೊಟ್ಟ ಖ್ಯಾತ ನಿರ್ದೇಶಕ
ಮುಂಬೈ: ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ, ಗೀತು ಮೋಹನ್​ ದಾಸ್​ ನಿರ್ದೇಶನದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್​: ದಿ ಫೇರಿ ಟೇಲ್​ ಫಾರ್​ ಗ್ರೋನಪ್ಸ್​​ ಬುಧವಾರ (ಆಗಸ್ಟ್​​. 26) ಪ್ರಪಂಚದಾದ್ಯಂತ ತೆರೆಕಂಡಿದೆ.
ಆದರೆ, ಈ ಸಿನಿಮಾ ಬಿಡುಗಡೆಯಾದ ದಿನದಿಂದ ಋಣಾತ್ಮಕ ವಿಮರ್ಶೆಗಳೇ ಹೆಚ್ಚು ಕೇಳಿಬರುತ್ತಿದ್ದು, ಈಗ ಈ ವಿವಾದಕ್ಕೆ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (RGV on Toxic) ಕೊಟ್ಟಿರುವ ಟಾಂಗ್​ ಸಕ್ಕತ್​ ಸೌಂಡ್​ ಮಾಡುತ್ತಿದೆ.

ಮತ್ತೊಮ್ಮೆ ಧುರಂಧರ್​ ನೋಡುತ್ತೇನೆ!

ಟಾಕ್ಸಿಕ್​ ಸಿನಿಮಾಗೆ ಎಲ್ಲೆಡೆ ಕೆಟ್ಟ ಕಮೆಂಟ್​ಗಳು ಬರುತ್ತಿರುವ ಹಿನ್ನಲೆ, ರಾಮ್​ ಗೋಪಾಲ್​ ವರ್ಮಾ ಕೂಡ ಇದಕ್ಕೆ ದನಿಗೂಡಿಸಿದ್ದು, 'ನಾನು ಮತ್ತೊಮ್ಮೆ ಧುರಂಧರ್​ ನೋಡುತ್ತೇನೆ' ಎಂದು ಹೇಳುವ ಮೂಲಕ ಟಾಕ್ಸಿಕ್​ ಸಿನಿಮಾವನ್ನು ನೋಡುವುದಿಲ್ಲ ಎಂದು ಪರೋಕ್ಷ ಟಾಂಗ್​ ನೀಡಿದ್ದಾರೆ.

ಆರ್​ಜಿವಿ ಎಲ್ಲಿಯೂ ಟಾಕ್ಸಿಕ್​ ಹೆಸರನ್ನು ಉಲ್ಲೇಖಿಸಿಲ್ಲವಾದರೂ ಈ ಟ್ವಿಟ್​ ಟಾಕ್ಸಿಕ್​ ಅನ್ನೇ ಉದ್ದೇಶಿಸಿ ಮಾಡಿದ್ದಾಗಿ ಅವರ ಬೆಂಬಲಿಗರು ನಂಬಿದ್ದಾರೆ.

ಧುರಂಧರ್ ಜೊತೆ ಬಿಡುಗಡೆಗೆ ಸಜ್ಜಾಗಿದ್ದ ಟಾಕ್ಸಿಕ್​!


ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಧುರಂಧರ್​ 2 ಸಿನಿಮಾ ಮಾರ್ಚ್​ 19 ಕ್ಕೆ ತೆರೆಕಾಣಲು ಮುಂದಾದಾಗ, ಟಾಕ್ಸಿಕ್​ ಕೂಡ ಇದೇ ದಿನದಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು.
ಆದರೆ, ಆ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದ್ದ ಹಿನ್ನಲೆ, ಆರ್ಥಿಕ ನಷ್ಟ ಉಂಟಾಗುವ ಸಂಭವ ವಿರುವ ಕಾರಣ, ಜೂನ್​ 6 ರಂದು ಮುಂದೂಡಲಾಗಿತ್ತು. ಕೊನೆಗೆ ಬಿಡುಗಡೆ ದಿನಾಂಕವನ್ನು ಆಗಸ್ಟ್​​ 26 ಕ್ಕೆ ಲಾಕ್​ ಮಾಡಲಾಯಿತು.

ಕೆ.ಜಿ.ಎಫ್​ ಅನ್ನು ಹಾಡಿ ಹೊಗಳಿದ್ದ ವರ್ಮಾ!

ಇವತ್ತು ಟಾಕ್ಸಿಕ್​ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಆರ್​ಜಿವಿ, ಕೆ.ಜಿ.ಎಫ್​ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಶಾಂತ್​ ನೀಲ್​ ಮತ್ತು ಯಶ್​ ಕುರಿತು ಮೆಚ್ಚುಗೆ ನುಡಿದ್ದಿದ್ದರು. ಕೆ.ಜಿ.ಎಫ್​ ತೆರೆಕಾಣುವ ಮೂಲಕ ಈಡೀ ಬಾಲಿವುಡ್​ ಬುಡಮೇಲಾಗಿ ಹೋಗಿದೆ ಎಂದು ಅವರು ನೀಡಿದ್ದ ಹೇಳಿಕೆ ಎಲ್ಲಾ ಕಡೆ ವೈರಲ್ ಆಗಿತ್ತು. ಆದರೆ ಈಗ ಹೊಸದಾಗಿ ತೆರೆಕಂಡಿರುವ ಟಾಕ್ಸಿಕ್ ಸಿನಿಮಾವನ್ನು ನೋಡುವ ಬದಲು ಮತ್ತೊಮ್ಮೆ ಧುರಂಧರ್​ ಅನ್ನೇ ನೋಡುತ್ತೇನೆ ಎಂಬ ಅವರ ಹೇಳಿಕೆ ಎಲ್ಲಾ ಸೋಷಿಯಲ್​ ಮೀಡಿಯಾ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ, (ಏಜನ್ಸೀಸ್​). ​