ಸಿನಿವಾಣಿ

ದಿನಸಿ ಖರೀದಿಸುವ ಮಜವೇ ಬೇರೆ! ಖುದ್ದಾಗಿ ಹೋಗಿ ಶಾಪಿಂಗ್ ಮಾಡಿದ ಸ್ಯಾಂಡಲ್​ವುಡ್ ನಟ ಯಾರು? ಗೆಸ್ ಮಾಡಿ…

ಬೆಂಗಳೂರು: ನಾಯಕ ನಟ ಶರಣ್ ಹೊಸ ಸಿನಿಮಾ ಶೂಟಿಂಗ್​ನಲ್ಲಿ ಬಿಝಿಯಾಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಮನೆಮಂದಿಯೊಂದಿಗೆ ಕಾಲ ಕಳೆಯುವ ಶರಟ್, ಇದೀಗ ಮಾರುಕಟ್ಟೆಗೆ ತೆರಳಿ ದಿನಸಿ ಸಾಮಾಗ್ರಿ ಖರೀದಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅವರ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

'ಖುದ್ದಾಗಿ ಹೋಗಿ ದಿನಸಿ, ಕಾಳು ಆರಿಸಿ ತಂದು, ಅಡುಗೆ ಮಾಡಿ ರುಚಿ ಸವಿಯೋ ಮಜವೇ ಬೇರೆ' ಎಂದು ಬರೆದುಕೊಂಡು ಶರಟ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಸಿನಿಮಾ ನಟ-ನಟಿಯರು ಬಹುತೇಕ ದಿನಗಳಲ್ಲಿ ಶೂಟಿಂಗ್ ಕಾರಣದಿಂದ ಮನೆಯಿಂದ ದೂರು ಇರುತ್ತಾರೆ. ಫ್ಯಾಮಿಲಿ ಹಾಗೂ ಹವ್ಯಾಸಗಳಿಗೆ ಸಮಯ ಹೊಂದಿಸಿಕೊಳ್ಳುವುದು ತುಸು ಕಷ್ಟ ಎಂದರೆ ತಪ್ಪಲ್ಲ. ಆದರೆ ನಟ ಶರಟ್ ಮಾರುಕಟ್ಟೆಗೆ ತೆರಳಿ ದಿನಸಿ ಶಾಪಿಂಗ್ ಮಾಡಿದ್ದಾರೆ.

ಆನ್‌ಲೈನ್ ಆರ್ಡರ್ ಮಾಡುವ ಜಗತ್ತಿನಲ್ಲಿ, ಸ್ಥಳೀಯ ಮಾರುಕಟ್ಟೆಗಳಿಂದ ತಾಜಾ ಉತ್ಪನ್ನ ಮತ್ತು ದಿನಸಿ ಖರೀದಿಸುವ ಬಗ್ಗೆ ಹೆಚ್ಚು ಮಹತ್ವ ನೀಡುತ್ತೇನೆ. ಇದೀಗ ಮಾರುಟ್ಟೆಗೆ ತೆರಳಿ ದಿನಸಿ ಸಾಮಾಗ್ರಿ ಖರೀದಿಸಿ ತಂದಿರುವುದು ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿತು ಎಂದು ಶರಣ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.