ಮುಂಬೈ: ಬಹಳ ದಿನಗಳ ನಂತರ ನಟಿ ಸಮಂತಾ ( Samantha ) ಅವರು ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಆದರೆ, ಈ ಬಾರಿ ಅವರು ಸಿನಿಮಾ ಮೂಲಕವಲ್ಲ, ಸಿಟಾಡೆಲ್ ಹನಿ ಬನ್ನಿ ಹೆಸರಿನ ವೆಬ್ ಸರಣಿಯ ಮೂಲಕ ಸಿನಿರಸಿಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ. ನಿನ್ನೆಯಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ.
ವಾಸ್ತವದ ಸಂಗತಿ ಏನೆಂದರೆ, ಇದು ಸ್ಟ್ರೀಮಿಂಗ್ ಆಗುತ್ತಿದೆ ಎಂಬುದು ಅನೇಕ ಜನರಿಗೆ ತಿಳಿದೇ ಇಲ್ಲ. ಆದ್ದರಿಂದ ಈ ವೆಬ್ ಸರಣಿಯನ್ನು ಎಷ್ಟರ ಮಟ್ಟಿಗೆ ಪ್ರಚಾರ ಮಾಡಲಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಆದರೆ, ಈ ಸರಣಿ ಬಿಡುಗಡೆಯಾದಾಗಿನಿಂದ ಸಮಂತಾಗೆ ಸಂಬಂಧಿಸಿದ ಕೆಲವು ಹಸಿಬಿಸಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಲಿಪ್ಲಾಕ್ ದೃಶ್ಯ ಹಾಟ್ ಟಾಪಿಕ್ ಆಗಿಬಿಟ್ಟಿದೆ.
ಹನಿ ಬನ್ನಿ ವೆಬ್ ಸೀರಿಸ್ನಲ್ಲಿ ಸಮಂತಾ ಪ್ರಯತ್ನಿಸಿರುವ ಸಾಹಸ ದೃಶ್ಯಗಳಿಗಿಂತ ನಾಯಕನ ಜೊತೆಗಿನ ರೊಮ್ಯಾನ್ಸ್ ಮತ್ತು ಆಕೆಯ ಲಿಪ್ಲಾಕ್ ದೃಶ್ಯಗಳೇ ಹೆಚ್ಚು ಮಾತನಾಡುತ್ತಿವೆ. ಈ ವೆಬ್ ಸರಣಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಸಮಂತಾ ಕಿಸ್ ವಿಚಾರಕ್ಕೆ ಬಂದರೆ, ಹಾಟ್ನೆಸ್ ಓವರ್ ಲೋಡ್ ಆಗಿದೆ ಎನ್ನುತ್ತಿದ್ದಾರೆ. ಅಲ್ಲದೇ, ಲಿಪ್ಲಾಕ್ ದೃಶ್ಯದಲ್ಲಿ ಮಾತ್ರವಲ್ಲದೆ ಕೆಲವು ಬೋಲ್ಡ್ ದೃಶ್ಯಗಳಲ್ಲಿಯೂ ಸಮಂತಾ ಮೈಚಳಿ ಬಿಟ್ಟು ನಟಿಸಿದ್ದಾರೆ ಎನ್ನುತ್ತಾರೆ ಕೆಲವರು.
ವಾಸ್ತವವಾಗಿ, ಸಮಂತಾ ಮೊದಲ ಬಾರಿಗೆ ತುಂಬಾ ಬೋಲ್ಡ್ ಆಗಿ ನಟಿಸಿದ್ದು ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ. ಈ ಸರಣಿ ಬಿಡುಗಡೆಯಾದಾಗ, ಅನೇಕ ಜನರು ಸಮಂತಾ ಮೇಲೆ ಆಕ್ರೋಶ ಹೊರಹಾಕಿದ್ದರು. ಮಾಜಿ ಪತಿ ನಾಗಚೈತನ್ಯ ಹಾಗೂ ಸಮಂತಾ ಈ ನಡುವೆ ಜಗಳ ಶುರುವಾಗಿದ್ದು ಕೂಡ ಇದೇ ಸರಣಿಯ ನಂತರ ಎನ್ನಲಾಗಿದೆ. ಆದರೀಗ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯನ್ನು ಮೀರಿಸುವಂತೆ ಸಿಟಾಡೆಲ್ ಹನಿ ಬನ್ನಿ ಸೀರಿನ್ನಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ.
ಅಂದಹಾಗೆ ಸಮಂತಾ, ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬಹಳ ವರ್ಷಗಳೇ ಕಳೆದಿವೆ. ಆಕೆಯ ಬೋಲ್ಡ್ನೆಸ್ ಅನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು. ಇದೀಗ ಹನಿ ಬನ್ನಿ ಸೀರಿಸ್ನ ದೃಶ್ಯಗಳು ಹಲ್ಚಲ್ ಹೆಬ್ಬಿಸಿವೆ. ಹಾಟ್ ದೃಶ್ಯಗಳನ್ನು ನೋಡಿ, ನಮ್ಮ ಸಮಂತಾ ಎಷ್ಟು ಸುಂದರವಾಗಿದ್ದಾರೆ ನೋಡಿದ್ದೀರಾ ಎಂದು ಕೆಲವರು ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸಮಂತಾ ಅಂತಹ ದೃಶ್ಯಗಳಲ್ಲಿ ನಟಿಸುವುದನ್ನು ಊಹಿಸಿಕೊಳ್ಳುವುದು ಕಷ್ಟ. ಏಕೆಂದರೆ ವಿಚ್ಛೇದನಕ್ಕೆ ಇದೇ ಕಾರಣ ಎಂದು ಈ ಹಿಂದೆಯೇ ಪ್ರಚಾರ ಮಾಡಲಾಗಿತ್ತು. ಹೀಗಾಗಿ ಆಕೆ ಬೋಲ್ಡ್ ಪಾತ್ರಗಳಿಂದ ದೂರ ಉಳಿಯುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಮಂತಾರ ಹಸಿಬಿಸಿ ದೃಶ್ಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. (ಏಜೆನ್ಸೀಸ್)