ಮತ್ತೆ ಒಂದಾದ ಕಮಲ್- ಮಣಿರತ್ನಂ: ಕಮಲ್ ಹುಟ್ಟುಹಬ್ಬಕ್ಕೆ ‘ಥಗ್‌ಲೈಫ್​’ ಚಿತ್ರದ ಟೀಸರ್ ಉಡುಗೊರೆ

kamla 2
Published on

ಭಾರತೀಯ ಚಿತ್ರರಂಗದಲ್ಲಿ ನಟ ಕಮಲ್ ಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ತಮ್ಮದೇ ಆದ ಛಾಪು ಮೂಡಿಸಿದವರು. ಈ ಇಬ್ಬರ ಕಾಂಬಿನೇಷನ್‌ನಲ್ಲಿ 1987ರಲ್ಲಿ ‘ನಾಯಗನ್’ ಚಿತ್ರ ಮೂಡಿಬಂದಿತ್ತು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸುವುದಲ್ಲದೇ, ಕಮಲ್ ನಟನೆಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಈ ಜೋಡಿಯಿಂದ ಮತ್ತೊಂದು ಅಪ್‌ಡೇಟ್ ದೊರೆತಿದೆ. 37 ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ ‘ಥಗ್‌ಲೈಫ್​ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ. ನಟ ಕಮಲ್ ಹಾಸನ್ ಗುರುವಾರ (ನ.7) ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಥಗ್‌ಲ್ೈ’ ತಂಡವು ಟೀಸರ್ ಬಿಡುಗಡೆಗೊಳಿಸುವ ಜತೆಗೆ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಟೀಸರ್‌ನಲ್ಲಿ ಕಮಲ್, ಸಾಹಸಮಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಉದ್ದವಾದ ಹೇರ್‌ಸ್ಟೈಲ್ ಗಮನಸೆಳೆಯುತ್ತದೆ. ಈ ಚಿತ್ರವು 2025ರ ಜೂನ್ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ೋಷಿಸಿದೆ. ಈ ಚಿತ್ರದಲ್ಲಿ ಕಮಲ್‌ಗೆ ತ್ರಿಷಾ ಕೃಷ್ಣನ್ ಜೋಡಿಯಾಗಿದ್ದಾರೆ. ಸಿಲಂಬರಸನ್, ಪಂಕಜ್ ತ್ರಿಪಾಠಿ, ಜೋಜು ಜಾರ್ಜ್ ಸೇರಿ ಹಲವರು ನಟಿಸಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಚಿತ್ರಕ್ಕಿದೆ. ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂನಲ್ಲಿ ಚಿತ್ರ ಮೂಡಿಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net