ಸಿನಿವಾಣಿ

ಮೈ ತುಂಬಾ ಇರುವ ಮಾಜಿ ಪತಿಯ ಗುರುತುಗಳನ್ನು ಅಳಿಸಿ ಹಾಕಲಿದ್ದಾರೆ ಸಮಂತಾ?

ನಟಿ ಸಮಂತಾ, ನಟ ನಾಗ ಚೈತನ್ಯ ತಮ್ಮ ದಾಂಪತ್ಯಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದಾರೆ. ಇವರಿಬ್ಬರದ್ದು ಎಂತಹ ಪ್ರೀತಿ ಎಂದು ತಿಳಿಯಲು ಅವರು ಹಾಕಿಸಿಕೊಂಡಿರುವ ಟ್ಯಾಟೂಗಳೇ ಸಾಕ್ಷಿ ಆಗಿವೆ. ಆದರೆ, ಸದ್ಯ ನಟಿ ಸಮಂತಾ ಅವರ ಮೈ ಮೇಲಿರುವ ಟ್ಯಾಟೂಗಳನ್ನು ಅಳಿಸಿ ಹಾಕಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿವೆ. ಹೌದು, ಸಮಂತಾ ಇಂತಹ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಈ ದಂಪತಿಯ ಅಭಿಮಾನಿಗಳಿಗೆ ಬೇಸರ ತಂದಿದೆ.
ಅಂದಹಾಗೆ, ನಟಿ ಸಮಂತಾ ತಾವು ಹಾಕಿಸಿಕೊಂಡ ಟ್ಯಾಟೂಗಳೆಲ್ಲವೂ, ಬಹುತೇಕ ಅವರ ಮಾಜಿ ಪತಿ ನಟ ನಾಗ ಚೈತನ್ಯ ಅವರಸ ಮೇಲಿರುವ ಪ್ರೀತಿಗೆ ಸಂಬಂಧ ಪಟ್ಟ ಟ್ಯಾಟೂಗಳು ಎಂದು ಎಲ್ಲರಿಗೂ ತಿಳಿದಿದೆ. ಈಗ ಇಬ್ಬರೂ ಬೇರಾಗಿರುವ ಕಾರಣಕ್ಕೆ ಸಮಂತಾ ಅವರ ಮೈ ಮೇಲಿರುವ ಟ್ಯಾಟೂಗಳನ್ನು ಅಳಿಸಿ ಹಾಕಲು ಮುಂದಾಗಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಸಮಂತಾ ಅವರ ಕೈ ಮಣಿಕಟ್ಟಿನ ಮೇಲೆ ಒಂದು ಹಚ್ಚೆ ಇದೆ. ಈ ಅಚ್ಚೆಯನ್ನೂ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಒಂದೇ ರೀತಿಯಲ್ಲಿ ಹಾಕಿಸಿಕೊಂಡಿದ್ದಾರೆ.
ಅದರ ನಂತರ, ನಟಿ ಸಮಂತಾ ಮತ್ತು ನಾಗ ಚೈನತ್ಯ ಅವರು ಎರಡು ಬೇರೆ ಟ್ಯಾಟೂಗಳು ಕೂಡ ಸುದ್ದಿ ಆಗಿದ್ದವು. ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡರೆ, ಸಮಂತಾ ತಮ್ಮ ಪ್ರೀತಿ ಸಂಕೇತವಾಗಿ ಒಂದು ಹಚ್ಚೆಯನ್ನ ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡರು. ಆ ಬಳಿಕ ಹಲವು ದಿನಗಳ ನಂತರ ಸಮಂತಾ ಅವರ ಬೆನ್ನ ಮೇಲೆ ಮತ್ತೊಂದು ಟ್ಯಾಟೂ ಕಾಣಿಸಿತು. ಅದುವೆ 'YMC' ಎನ್ನುವ ಅಕ್ಷರಗಳು.
ಇದಕ್ಕೆ ಅರ್ಥ, ನಾಗ್ ಮತ್ತು ಸಮಂತಾ ಅವರ ಮೊದಲ ಸಿನಿಮಾ 'ಯೇ ಮಾಯಾ ಚೇಸಾವೆ'ಯ ಟೈಟಲ್ ಎನ್ನಲಾಗಿದೆ. ಇದಿಷ್ಟೇ ಅಲ್ಲದೇ, ಸ್ಯಾಮ್ ಅವರ ಮತ್ತೊಂದು ಟ್ಯಾಟೂವನ್ನು 2019 ರಲ್ಲಿ ಕರೊನಾ ಮುಂಚಿತವಾಗಿ ಎಲ್ಲರಿಗೂ ತೋರಿಸಿದರು. ಅದುವೆ, ನಾಗ್ ಹೆಸರು. ಹೌದು, ಸಮಂತಾ 'ಚೈ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರು. ಆದರೆ, ಈಗ ಇದೀಗ ಸಮಂತಾ ಮತ್ತು ಚೈತನ್ಯ ಇಬ್ಬರೂ ದೂರ ಆಗಿದ್ದು, ಸಮಂತಾ ತಮ್ಮ ಮೈ ಮೇಲಿರುವ ಈ ನಾಲ್ಕು ಟ್ಯಾಟೂಗಳನ್ನು ಅಳಿಸಿ ಹಾಕಲಿದ್ದಾರೆ ಎಂಬ ಸುದ್ದಿಗಳು ಕೇಳಬಂದಿವೆ.