ಸಿನಿ ತಾರೆಯರು ಟ್ರೋಲ್‌ಗೆ ಒಳಗಾಗುವುದು, ಪೇಚಿಗೆ ಸಿಲುಕುವುದು ಇತ್ತೀಚೆಗೆ ಸಹಜವಾಗಿ ಬಿಟ್ಟಿದೆ. ಅಂದಹಾಗೆ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಥವಾ ಯಾವುದೇ ಸಿನಿರಂಗ ಆಗಲಿ, ಟ್ರೋಲ್ ಆಗದ ನಟಿಯರು ಯಾರಿದ್ದಾರೆ ಹೇಳಿ? ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಈಗ, ಬಹಳಷ್ಟು ಬಾರಿ ಟ್ರೋಲ್ ಆಗಿರುವ ನಟಿ ಸಮಂತಾ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಹೌದು, ವಿಚ್ಛೇದನದ ಬಳಿಕ ಸಮಂತಾ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ತಿಂಗಳಿಗೆ ಎರಡು ಮೂರು ಬಾರಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಲೆಳೆಯುತ್ತಲೇ ಇದ್ದಾರೆ. ಇದೀಗ, ನೆಟ್ಟಿಗರಿಗೆ ಸಮಂತಾ ಕಾಲೆಳೆಯಲು ಸಿಕ್ಕಿರುವ ಹೊಸ ಕಾರಣ ಎಂದರೆ ಅದು ನಟಿ ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ನಟಿಸಿರುವುದು.
ಹೌದು, ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಒಂದು ಮದ್ಯದ ಬ್ರ್ಯಾಂಡ್ಗೆ ಪ್ರಚಾರ ಮಾಡಿದ್ದಾರೆ. ಅಷ್ಟೇ... ನಟಿಯ ಜಾಹೀರಾತು ನೋಡಿದ ನೆಟ್ಟಿಗರು ಸಮಂತಾ ವಿರುದ್ಧ ಕಾಮೆಂಟ್ಗಳ ಸುರಿ ಮಳೆಯೇ ಸುರಿಸಿದ್ದಾರೆ. ಇನ್ನು, ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದಾಗಿನಿಂದ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಎಂದರೇ ತಪ್ಪಾಗುವುದಿಲ್ಲ. ಇನ್ನು, ಇಷ್ಟು ದಿನ ಸಮಂತಾ ಅವರನ್ನು ಹೊಗಳಿದ ಅವರ ಅಭಿಮಾನಿಗಳಿಗೆ ಕೂಡಾ ಸಮಂತಾ ಅವರು ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಹೆಜ್ಜೆ ಹಾಕಿ, ಅದನ್ನು ಪ್ರಚಾರ ಮಾಡಿದ್ದೇ ದೊಡ್ಡ ತಪ್ಪು ಎಂಬಂತೆ ಕಾಣಿಸಿದೆ ಅನಿಸುತ್ತೆ.
ಸಮಂತಾ ರುತ್ ಪ್ರಭು ಅಲಿಯಾಸ್ ಅಭಿಮಾನಿಗಳ ಪ್ರೀತಿಯ ಸ್ಯಾಮ್, ಇತ್ತೀಚೆಗೆ ಆಲ್ಕೋಹಾಲ್ ಬ್ರ್ಯಾಂಡ್‌ನಲ್ಲಿ ನಟಿಸಿದ ಜಾಹೀರಾತಿನ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಸ್ಯಾಮ್ ಅಭಿಮಾನಿಗಳ ಕಣ್ಣುಗಳು ಕೆಂಪಾಗಿವೆ. ಹೌದು, ಸಮಂತಾರನ್ನು ನೆಟ್ಟಿಗರು ಇಂತಹ ಜಾಹೀರಾತಿನಲ್ಲಿ ನಟಿಸಿದ ಕಾರಣ ಬ್ಯಾಕ್ ಟು ಬ್ಯಾಕ್ ಟ್ರೋಲ್ ಮಾಡುತ್ತಿದ್ದಾರೆ. ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ವೈಟ್ ಹಾಗೂ ಮರೂನ್ ಕಾಸ್ಟ್ಯೂಮ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಸ್ಯಾಮ್ಗೆ ಟ್ರೋಲಿಗರು ಮೊದಲು ಅವರು ಚಿಕ್ಕ ಚಿಕ್ಕ ಡ್ರೇಸ್ಗಳು ತೊಟ್ಟಿರುವ ಕಾರಣ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ನಂತರ, ನಟಿಯಾಗಿ ಕೇವಲ ಹಣಕ್ಕಾಗಿ ಇಂತಹ ಜಾಹೀರಾತನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ''ವಿಚ್ಛೇದನದ ಬಳಿಕ ಸಮಂತಾ ಹಣಕ್ಕಾಗಿ ಯಾವ ಮಟ್ಟಕ್ಕೆ ಇಳಿದಿದ್ದಾರೆ'' ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ, ನಟಿ ಸಮಂತಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಾಲು ಸಾಲು ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಅಭಿನಯಿಸಿ ಸಿಕ್ಕಾಪಟ್ಟೆ ಬ್ಯೂಸಿಯಾಗುತ್ತಾ, ಜತೆಗೆ ಹೆಚ್ಚು ಹೆಚ್ಚು ಹಣ ಮಾಡುತ್ತಿದ್ದಾರೆ.